ಬಂಟ್ವಾಳ: ಕ್ರೀಡೆ ಮನುಷ್ಯನ ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವುದರೊಂದಿಗೆ ಶಾರೀರಿಕ ಹಾಗೂ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಧ್ಯಯನಕ್ಕೆ ಕೊಡುವಷ್ಟೇ ಮಹತ್ವವನ್ನು ಕ್ರೀಡೆಗೆ ನೀಡಬೇಕು ಎಂದು ಡಾ.ಮಮತಾ ಪಿ ಶೆಟ್ಟಿ ನುಡಿದರು. 

 ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು  ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಯ ಸಂಚಾಲಕಿ  ಕೆ ರೇಖಾ ಶೆಣೈ ವಹಿಸಿದ್ದರು. ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ ಅತಿಥಿಗಳನ್ನು ಪರಿಚಯಿಸಿದರು. ಬಿ.ಆರ್.ಎಂ.ಪಿ.ಸಿ. ಶಾಲೆಯ ಪ್ರಾಂಶುಪಾಲರಾದ  ಪೂರ್ಣೇಶ್ವರಿ ಭಟ್ ಸ್ವಾಗತಿಸಿ, ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ವಂದಿಸಿದರು. ದೈಹಿಕ ಶಿಕ್ಷಕಿ ಪ್ರತೀಕ್ಷಾ ಕ್ರೀಡಾದಿನದ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ಅನನ್ಯಾ ತಂಡದವರು ಪ್ರಾರ್ಥಿಸಿದರು.  ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಸಮೂಹ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಕರಾದ ರಾಜೇಶ್ ಕುಮಾರ್ ಕೆ ಹಾಗೂ ಬಸವರಾಜ ಹನುಮಂತ ಕಾಂಬ್ಳೆರವರು ಕ್ರೀಡಾಚಟುವಟಿಕೆಗಳನ್ನು ನೆರವೇರಿಸಿದರು. 

By suddi9

Leave a Reply

Your email address will not be published. Required fields are marked *