ಬಂಟ್ವಾಳ :ಪುದು ಗ್ರಾಮ ಪಂಚಾಯತ್ , ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವುಗಳ ಸಹಯೋಗದಲ್ಲಿ ಗ್ರಾಮ ಮಟ್ಟದ ಶಿಕ್ಷಣ ಅವಲೋಕನ  ಮತ್ತು ಕಾನೂನು ಅರಿವು ಕಾರ್ಯಕ್ರಮವು ಪುದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ ಇವರು ವಹಿಸಿದರು.
ಪಡಿ ಸಂಸ್ಥೆಯ ಸಿ.ಇ.ಒ ರೆನ್ನಿ ಡಿ’ಸೋಜ ಅವರು ಮಾತನಾಡಿ, ಶಿಕ್ಷಣ ಅವಲೋಕನ ಕಾರ್ಯಕ್ರಮದ ರೂಪುರೇಷೆ ಮತ್ತು ಉದ್ದೇಶಗಳನ್ನು ವಿವರಿಸಿದರು.
ವಕೀಲರಾದ ಸುಚಿತ್ರಾ ಕೆ. ಅವರು ಕಾನೂನು ಮಾಹಿತಿ ನೀಡಿದರು.
ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ, ರುಕ್ಸಾನ ಭಾನು,ಪಿಡಿಒ  ಡಾ. ಸ್ಮೃತಿ, ಕಾರ್ಯದರ್ಶಿ ಕವಿತಾ, ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು , ಬಂಟ್ವಾಳ ತಾಲ್ಲೂಕು, ಕವಿತಾ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಸಂಜೀವಿನಿ ಸದಸ್ಯರು, , ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವೇಕ್  ಸ್ವಾಗತಿಸಿದರು.ಅಸುಂತಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *