ಮೊಡಂಕಾಪು : ವಲಯ ಮಟ್ಟದ ಕ್ರೀಡಾಕೂಟ
ಬಂಟ್ವಾಳ:ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಶಿಸ್ತು ಮತ್ತು ಅರೋಗ್ಯವಂತ ಸಮಾಜ ನಿಮರ್ಾಣವಾಗುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಮೊಡಂಕಾಪು ದೀಪಿಕಾ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ಸರ್ಕಾರಿ ಪ್ರೌಢಶಾಲೆ ಸಹಭಾಗಿತ್ವದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಮೊಡಂಕಾಪು ಚರ್ಚ್ ನ ಧರ್ಮಗುರು ವಿಕ್ಟರ್ ಡಿಸೋಜ ಮತ್ತು ಮೆಲ್ವಿನ್ ಶುಭ ಹಾರೈಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್ ನಾವಡ, ವಕೀಲ ಅಶ್ವಿನ್ ಕುಮಾರ್ ರೈ, ಉದ್ಯಮಿ ಪ್ರಸಾದ್ ಗರೋಡಿ, ರಾಮಕೃಷ್ಣ ಉಡುಪ, ನೋಡಲ್ ಅಧಿಕಾರಿ ಜಗದೀಶ್ ರೈ, ತಾ. ಪಂ. ಮಾಜಿ ಸದಸ್ಯ ಯಶವಂತ ಪೊಳಲಿ, ಅಧಿಕಾರಿಗಳಾದ ರವೀಂದ್ರ, ವಿದ್ಯಾ, ಹೇಮಲತಾ, ರಮೇಶ್, ಲೋಕೇಶ್ ಪೊಳಲಿ, ಪ್ರೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ರಂಜಿತಾ ಮತ್ತಿತರರು ಇದ್ದರು.

ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಸುಬ್ರಾಯ ಪೈ ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮ ವಂದಿಸಿದರು.
ಶಿಕ್ಷಕರಾದ ಜಯಂತ್, ಅಜಿತ್ ಮತ್ತು ಸುನಿಲ್ ಲೂವೀಸ್ ಕಾರ್ಯಕ್ರಮ ನಿರೂಪಿಸಿದರು



