ಬಂಟ್ವಾಳ : ಶಿಕ್ಷಣವು ಪರಿಪೂರ್ಣತೆಯಿಂದ ಕೂಡಿರಬೇಕಾದರೆ ದೈಹಿಕ ಚಟುವಟಿಕೆಗಳಿಂದ ಕೂಡಿರಬೇಕು   ಕ್ರೀಡೆಗಳು ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುದರ  ಜೊತೆಗೆ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಉಂಟುಮಾಡುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ ಹೇಳಿದರು.

ಗುರುವಾರ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ,ಸರಕಾರಿ ಪ್ರೌಢಶಾಲೆ ಕಡೇಶಿವಾಲಯ ನೇತೃತ್ವದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆದ 16 ರಿಂದ 17  ವಯೋಮಾನದ  ಕಲ್ಲಡ್ಕ ವಲಯ ಮಟ್ಟದ ಕ್ರೀಡಾಕೂಟ  – 2025 ರ ಧ್ವಜಾರೋಹಣ ಗೈದು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್  ಪತಸಂಚಲನದ ಗೌರವಂದನೆ ಸ್ವೀಕರಿಸಿದರು.ಮಾಣಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಪ್ರಹ್ಲಾದ ಜಿ ಶೆಟ್ಟಿ ಕ್ರೀಡಾ ಜೊತಿ ಸ್ವೀಕರಿಸಿ ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಬಂಟ್ವಾಳ ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ  ಆಶಾ ನಾಯಕ್ ಪ್ರಸ್ತಾವನೆಗೈದರು.
ವಿದ್ಯಾರ್ಥಿ ಕುಮಾರಿ ಸಾನ್ವಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರುಕ್ರೀಡಾಕೂಟದ ನೇತೃತ್ವ ವಹಿಸಿದ್ದ ಕಡೇಶಿವಾಲಯ ಸರಕಾರಿ ಪ್ರೌಢ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖ ವತಿಯಿಂದ ಪ್ರಶಂಶನಾ ಪತ್ರ ವಿತರಿಸಿದರು.


ಕ್ರೀಡಾ ಕೂಟ ನಡೆಸಲು ಸ್ಥಳಾವಕಾಶ ಒದಗಿಸಿ ಕೊಟ್ಟ  ಬಾಲವಿಕಾಸ ಆಂಗ್ಲ ಮಾಧ್ಯಮ  ಶಾಲಾ ಸಂಚಾಲಕರನ್ನು  ಗೌರವಿಸಲಾಯಿತು.ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕೆ, ಸದಸ್ಯರುಗಳಾದ ಶೀನ ನಾಯ್ಕ , ಪ್ರಮೀಳಾ, ವಶೀತ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ ಪೂಜಾರಿ, ಸದಸ್ಯರಾದ ಗಿರಿಯಪ್ಪ ಗೌಡ, ಮಾಣಿ ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಕ್ಲಸ್ಟರಿನ ಸಿ ಆರ್ ಪಿ ಗಳಾದ ಸುಧಾಕರ್ ಭಟ್, ಜ್ಯೋತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಸಂಪತ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್, ಕಲ್ಲಡ್ಕ ವಲಯ ಕ್ರೀಡಾಕೂಟ ನೋಡಲ್ ಅಧಿಕಾರಿ ಜಗದೀಶ್, ಸಹ ನೋಡಲ್ ಪ್ರಕಾಶ್ ಟಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಭಾಸ್ಕರ್ ನಾಯ್ಕ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಕ ದಿನಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *