ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲ್ಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲ್ಲೂಕು ಬಿ ಸಿ ರೋಡ್ ವಲಯ ಇದರ ವತಿಯಿಂದ ಮೊಡಂಕಾಪು  ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ   ಶುಕ್ರವಾರ ಜರಗಿತು.

ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಶೇಖರ್ ಸಾಮಾನಿ ಕುರಿಯಾಳ ಕಾರ್ಯಕ್ರಮ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ನಿವೃತ ಆರೋಗ್ಯ ಮೇಲ್ವಿಚಾರಕರಾದ ಜಯರಾಮ ಪೂಜಾರಿ ಅಂಪನ್ಮೂಲ ವ್ಯಕ್ಯಿಯಾಗಿ ಭಾಗವಹಿಸಿ  ದುಶ್ಚಟಗಳಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ,ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ  ದುಶ್ಚಟಕ್ಕೆ ಬಲಿಯಾಗದೆ  ಆರೋಗ್ಯ ವನ್ನು ಕಾಪಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಪ್ರಜೆಯಾಗಬೇಕು ಎಂದರು.

.ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಮರಿಯಾ ಪೆಲ್ಸಿಟಾ ರವರು ಈ ಉತ್ತಮ ಕಾರ್ಯಕ್ರಮದಲ್ಲಿ ಸಿಕ್ಕ ಮಾಹಿತಿ ಯನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ
“ನಶ್ಯಾವೆಂಬ ನರಕ” ಕಿರುಚಿತ್ರವನ್ನು ವಿಡಿಯೋ ವನ್ನು ವಿದ್ಯಾರ್ಥಿಗಳಿಗೆ  ತೋರಿಸಲಾಯಿತು
  ಗ್ರಾಮಾಭಿವೃದ್ದಿ ಯೋಜನೆಯ ಬಿ ಮೂಡ ಒಕ್ಕೂಟದ ಉಪಾಧ್ಯಕ್ಷರಾದ ಪವಿತ್ರ  ಬಿ. ಎಸ್ ಉಪಸ್ಥಿತರಿದ್ದರು.
ಬಿ ಮೂಡ ಒಕ್ಕೂಟದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿ, ವಿದ್ಯಾರ್ಥಿನಿ ಕು ವಿದ್ಯಾ ವಂದಿಸಿದರು .
ಬಿ ಸಿ ರೋಡ್ ವಲಯದ ಮೇಲ್ವಿಚಾರಕರಾಕ ಗಿರೀಶ್  ಕಾರ್ಯಕ್ರಮ ನಿರೂಪಿಸಿದಾರು

By suddi9

Leave a Reply

Your email address will not be published. Required fields are marked *