Published On: Wed, Oct 29th, 2025

ರಾಷ್ಟ್ರೀಯ ಕರಾಟೆಯಲ್ಲಿ ಮೂಡಬಿದ್ರೆಯ ಅಲ್ಮಫಝ್ಆಂಗ್ಲ ಮಾಧ್ಯಮ ಶಾಲೆಯ 7 ವಿದ್ಯಾರ್ಥಿಗಳಿಗೆ 10 ಪದಕ

ಕೈಕಂಬ : ಶೊರೀನ್-ರಿಯೂ ಕರಾಟೆ ಅಸೋಸಿಯೇಶನ್(ರಿ) ಸಂಸ್ಥೆಯು ಮೂಡಬಿದ್ರೆಯ ಎಂ. ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಮೂಡಬಿದ್ರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ 8 ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದ್ರೆ ಕೋಡಂಗಲ್ಲಿನ ಅಲ್ಮಫಝ್ ಆಂಗ್ಲ ಮಾಧ್ಯಮ ಶಾಲೆಯ 7 ಮಂದಿ ವಿದ್ಯಾರ್ಥಿಗಳು ಕುಮಿಟಿ ಮತ್ತು ಕಟ್ಟಾ ವಿಭಾಗದಲ್ಲಿ ಒಂದು ಚಿನ್ನ ಸಹಿತ ಒಟ್ಟು 10 ಪದಕ ಗಳಿಸಿದ್ದಾರೆ.

ಗ್ರೀನ್ ಬೆಲ್ಟ್‌ ನ 10 ವರ್ಷದ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಶಫಾಫ್ ಚಿನ್ನದ ಪದಕ ಗೆದ್ದಿದ್ದಾರೆ. 12 ವರ್ಷ ಕೆಳಗಿನ ವಯೋಮಿತಿಯ ಕುಮಿಟೆ ವಿಭಾಗ ಮತ್ತು ಕಟ್ಟಾ ವಿಭಾಗದಲ್ಲಿ ಮುಹಮ್ಮದ್ ಶಫೀನ್ ಹಂಝ 2 ಬೆಳ್ಳಿ ಪದಕ ಮತ್ತು ಬ್ಲ್ಯೂ ಬೆಲ್ಟ್‌ ನ 11 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮೊಹಮ್ಮದ್ ಮುಹಾಝ್ ಬೆಳ್ಳಿ ಪದಕ ಗಳಿಸಿದ್ದಾರೆ.

ಆರೇಂಜ್ ಬೆಲ್ಟ್‌ 6 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಅಫ್ನಾನ್, ವೈಟ್ ಬೆಲ್ಟ್‌ ನ 11 ವರ್ಷ ವಯೋಮಿತಿ ಕುಮಿಟೆ ವಿಭಾಗದಲ್ಲಿ ಮಾಮೆದ್ ಸೈಯ್ಯದ್ ಅಮಾನ್, ಬ್ಲ್ಯೂ ಬೆಲ್ಟ್‌ ನ 11 ವರ್ಷ ವಯೋಮಿತಿಯ ಕಟ್ಟಾ ಮತ್ತು ಕುಮಿಟೆ ವಿಭಾಗದಲ್ಲಿ ಮೊಹಮ್ಮದ್ ಹಿಶಾಂ ಹಾಗೂ ಗ್ರೀನ್ ಬೆಲ್ಟ್‌ ನ ೯ ವರ್ಷ ವಯೋಮಿತಿಯ ಕಟ್ಟಾ ಮತ್ತು ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಶಿಮಾಝ್ ಕಂಚಿನ ಪದಕ ಗಳಿಸಿದ್ದಾರೆ.

ಅಲ್ಮಫಝ್ ಶಾಲೆಯ 7 ಮಂದಿ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಎಲ್ಲ 7 ಮಕ್ಕಳು ಪದಕ ಗಳಿಸಿದ್ದಾರೆ. ಮಕ್ಕಳ ಸಾಧನೆಗೆ ಶಾಲಾ ದೈಹಿಕ ಶಿಕ್ಷಕ ಸರ್ಫಾಝ್ ಪುತ್ತಿಗೆ ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter