ಶ್ರೀ ಕ್ಷೇತ್ರ ಪೊಳಲಿಯಲ್ಲಿ ನ.೦೫ರಂದು ಅಪ್ಪದ ಪೂಜೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಅಪ್ಪದ ಪೂಜೆಯು ನ.೦೫ರಂದು ಬುಧವಾರ ರಾತ್ರಿ ಶ್ರೀ ಕ್ಷೇತ್ರದಲ್ಲಿ ಜರಗಲಿದೆ.

ಅ. ೩೦ ಗುರುವಾರದಿಂದ ಭಕ್ತಾಧಿಗಳು ಒಂದು ಪೂಜೆಗೆ ೫೦.ರೂ ಪಾವತಿಸಿ ಅಪ್ಪದ ಪೂಜೆಯ ರಶೀದಿಯನ್ನು ದೇವಳದ ಸೇವಾ ಕೌಂಟರ್‌ನಲ್ಲಿ ಪಡೆಯ ಬಹುದು. ನ.೫ರಿಂದ ನ.೬ರವರೆಗೆ ಶ್ರೀ ಕ್ಷೇತ್ರದಲ್ಲಿ ಆಹೋರಾತ್ರಿ ಭಜನೋತ್ಸವ ನಡೆಯಲಿದೆ.ಎಂದು ದೇವಳದ ಪ್ರಕಟನೆ ತಿಳಿಸಿದೆ.



