ನೂತನ ಮಾಡ ನಿರ್ಮಾಣಕ್ಕೆ ಶಿಲಾನ್ಯಾಸ
ಬಂಟ್ವಾಳ: ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಜೀರ್ಣೋದ್ಧಾರ ಪ್ರಯುಕ್ತ ನೂತನ ಮಾಡ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಶುಕ್ರವರ ನೆರವೇರಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು.
ಈ ಸಂದರ್ಭ ಸಜೀಪ ಮಾಗಣೆ ಕಾಂತಾಡಿ ಗುತ್ತುಗಣೇಶ ಶೆಟ್ಟಿ,ಮಾಡದಾರು ಗುತ್ತು ಶಶಿಧರ ರೈ ಯಾನೆ ನಾರಣ ಆಳ್ವ ,ನಗ್ರಿ ಗುತ್ತು ಜಯರಾಮ ಶೆಟ್ಟಿ,ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ದೇವಿ ಪ್ರಸಾದ್ ಪೂಂಜಾ, ಜೀವನ ಆಳ್ವ,ಹರೀಶ್ ರೈ,ರಾಜಾರಾಮ ಆಳ್ವ,ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ,ದಯಾನಂದ ಪೂಜಾರಿ ಯಾನೆ ಕುಂಜ್ಞ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು



