ಸಾಮೂಹಿಕ ದೀಪಾರಾಧನೆಗೆ ಚಾಲನೆ
ಬಂಟ್ವಾಳ: ಸಜೀಪನಡು ಗ್ರಾಮದ ಬಿಲ್ಲಂಪದವು ಕಾಳಾದ್ರಿ ಸಾನಿಧ್ಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಸಾಮೂಹಿಕ ದೀಪಾರಾಧನೆಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರು ಚಾಲನೆ ನೀಡಿದರು.

ಸ ಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ,ಸಜೀಪ ಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಪ್ರಗತಿ ಪರ ಕೃಷಿಕ ನಗ್ರಿ ಶ್ರೀನಿವಾಸ್ ಭಟ್ ,ಅಧ್ಯಾಪಕ ಜಿ.ರಾಮಕೃಷ್ಣ ಭಟ್ ,ಸಜೀಪ ಮಾಗಣೆ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ಶೆಟ್ಟಿ ಯಾನೆ ಉಗ್ಗ ಶೆಟ್ಟಿ,ಸಜೀಪ ಗುತ್ತು ಗಡಿಪ್ರದಾನರಾದ ಮುತ್ತಣ್ಣ ಶೆಟ್ಟಿಯಾನೆ ಕಾಳಪ್ಪ ಶೆಟ್ಟಿ,ಶಿವರಾಮ ಭಂಡಾರಿ ಬಿಜಂತಾಡಿ ಗುತ್ತು,ಕೆ.ರಾಧಾಕೃಷ್ಣ ಆಳ್ವ,ಪ್ರವೀಣ್ ಆಳ್ವ ,ಕಿಶನ್ ಸೇನವ,ಸುಧಾಕರ ಕೆಟಿ. ಮೊದಲಾದವರು ಉಪಸ್ಥಿತರಿದ್ದರು



