Published On: Thu, Oct 23rd, 2025

ಮಂಗಳೂರಿನಲ್ಲಿ ಸಂಚಾರಿ ಹೈ ಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಪೋಸ್ಟ್ ಕಾರ್ಡ್ ಚಳವಳಿ

ಬಂಟ್ವಾಳ: ಮಂಗಳೂರಿನಲ್ಲಿ ಸಂಚಾರಿ ಹೈ ಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಗುರುವಾರ ಬಿ.ಸಿ.ರೋಡಿನಲ್ಲಿ ವಕೀಲರ ಸಂಘ (ರಿ), ಬಂಟ್ವಾಳ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ನಡೆಯಿತು.


ಬಂಟ್ವಾಳದ ಹಿರಿಯ ವಕೀಲರು, ಸಂಘದ ಮಾಜಿ ಅಧ್ಯಕ್ಷರಾದ ಪಿ. ಜಯರಾಮ್ ರೈ ಅವರು ಪೋಸ್ಟ್ ಕಾರ್ಡ್ ಚಳಿವಳಿಗೆ ಚಾಲನೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ. ಅವರು ಪೋಸ್ಟ್ ಕಾರ್ಡ್ ಚಳವಳಿಯನ್ನು ಉದ್ದೇಶಿಸಿ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸಂಚಾರಿ ಹೈ ಕೋರ್ಟ್ ಪೀಠ ರಚನೆಯಾಗಬೇಕೆಂಬುದುಎರಡು ದಶಕಗಳ ಬೇಡಿಕೆಯಾಗಿದೆ.


ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಪಿ. ಚಂಗಪ್ಪರವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಚ್.ವಿ. ರಾಘವೇಂದ್ರ ರವರ ನೇತೃತ್ವದಲ್ಲಿ ಹೋರಾಟಕ್ಕೆ ಮತ್ತೆ ವೇಗ ಸಿಕ್ಕಿದೆ ಎಂದರು.


ಮುಂದುವರಿದ ಹೋರಾಟದ ಭಾಗವಾಗಿ ಪೋಸ್ಟ್ ಕಾರ್ಡ್ ಅಭಿಯಾನ ಚಳುವಳಿಯು ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸಹಯೋಗದಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ ಎಂದ ಅವರು
ಹೈ ಕೋರ್ಟ್ ಪೀಠ ರಚನೆಗೆ ಮಂಗಳೂರಿನಲ್ಲಿ ಜಾಗ ಗುರುತಿಸಲಾಗಿದ್ದು, ಸರಕಾರ ಮತ್ತು ರಾಜ್ಯಪಾಲರನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅಭಿಯಾನ ಮತ್ತು ಹೋರಾಟಗಳು ಆರಂಭವಾಗಿದ್ದು, ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದರು.ಈ ಸಂದರ್ಭದಲ್ಲಿ ಹಿರಿಯ ಕಿರಿಯ ವಕೀಲರು, ಸಾರ್ವಜನಿಕರು, ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಭಾಗವಹಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter