ಬಂಟ್ವಾಳದಲ್ಲಿ RSS ಶಕ್ತಿಪ್ರದರ್ಶನ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯದಶಮಿ ಪಥಸಂಚಲನ
ಬಂಟ್ವಾಳ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಡ್ಡಿಪಡಿಸಿದ ಪರಿಣಾಮ ಹೆಚ್ಚು ಹೆಚ್ಚು ಆರ್ ಎಸ್ ಏಸ್ ಗೆ ಸ್ವಯಂ ಸೇವಾಕಾರಾಗಿ ಬರುವ ಕಾರ್ಯಕರ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಅ.19ರಂದು ಬಾನುವಾರ ದಕ್ಷಿಣಕನ್ನಡದ ಬಂಟ್ವಾಳದಲ್ಲಿ ಸಂಘ ಸೈನಿಕರ ವಿಜಯೋತ್ಸವವನ್ನು ಸಂಭ್ರಮದಲ್ಲಿ ಆಚರಿಸುವಂತಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಚಟುವಟಿಕೆಯನ್ನು ಆರಂಭಿಸಿ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಶತಾಬ್ದಿ ಪಥಸಂಚಲನ ನಡೆಯುತ್ತಿದ್ದು, ಭದ್ರಕೋಟೆ ಕರಾವಳಿ ಜಿಲ್ಲೆಯಲ್ಲಿ RSS ಕಾರ್ಯಕರ್ತರು ಶಕ್ತಿ ಪ್ರದರ್ಶನ ನಡೆಸಿದರು.

ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಮೂರು ಕೇಂದ್ರ ಗಳಿಂದ ಹೊರಟ ರಾಷ್ಟ್ರೀಯ ಯಂಸೇವಕ ಸಂಘ ಕಾರ್ಯಕರ್ತರ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಅಪಾರ ಸಂಖ್ಯೆಯಲ್ಲಿ ಗಣವೇಷಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗಿಯಾದರು.

ಸಂಘದ ಸೈನಿಕರಂತೆ ಬಂಟ್ವಾಳದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಿದರು. ವಿವಿಧ ವಾಹಿನಿಗಳಲ್ಲಿ ನೂರಾರು ಸ್ವಯಂಸೇವಕರು ಘೋಷ್ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ವೈಖರಿ ಸಂಘ ಶಿಸ್ತಿಗೆ ಸಾಕ್ಷಿಯಾಯಿತು.

ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಗಣವೇಷಧಾರಿ ಕಾರ್ಯಕರ್ತರಿಗೆ ಪುಷ್ಪಾರ್ಚನೆ ಮಾಡಿ ದೇಶಭಕ್ತಿ ಪ್ರದರ್ಶಿಸಿ ಪಥ ಸಂಚಲನಕ್ಕೆ ಸಾಕ್ಷಯಾದರು. ಕಲ್ಲಡ್ಕ ಡಾ. ಪ್ರಭಾಕರ ಭಟ್ ಸೇರಿದಂತೆ ಶಾಸಕ ರಾಜೇಶ್ ನಾಯ್ಕ್ ಬಿಜೆಪಿಯ ವಿವಿಧ ನಾಯಕರು ಸಂಘಟನೆಯ ಪ್ರಮುಖರನೇಕರು ಕಾರ್ಯಕರ್ತರು ಶಿಸ್ತಿನ ಶಿಫಾಯಿಯಂತೆ ಪಥಸಂಚಲದಲ್ಲಿ ಭಾಗಿಯಾಗಿದ್ದರು.



