ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಹಿರಿಯ ಭಾಗವತ ಯಕ್ಷರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ನಿಧನ
ಪೊಳಲಿ: ಸಂಗೀತಮಯವಾದ ಭಾಗವತಿಕೆಯ ಮುಖೇನ ರಸಿಕರ ಮನವನ್ನು ಮೆಚ್ಚಿಸಿ ಕೀರ್ತಿ ಸಂಪನ್ನರಾಗಿರುವ ಶ್ರೀ ದಿನೇಶ್ ಅಮ್ಮಣ್ಣಾಯರು ಇಂದು ಅ.16ರಂದು ಗುರುವಾರ ವಿಧಿವಶರಾಗಿದ್ದಾರೆ.

ಅಮ್ಮಣ್ಣಾಯರು ಪ್ರಸ್ತುತ ಶ್ರೀ ಎಡನೀರು ಯಕ್ಷಗಾನ ಮಂಡಳಿಯ ಕಲಾವಿದರಾಗಿ ಸೇವೆ ಮಾಡುತ್ತಿದ್ದರು.
7-11-1959ರಲ್ಲಿ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿ ಅಮ್ಮ ದಂಪತಿಯ ಸುಪುತ್ರನಾಗಿ ಜನಿಸಿದರು. ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಪಡೆದು ಇವರು ವಿದ್ವತ್ತಿನ ಮನೆತನದಲ್ಲೆ ಹುಟ್ಟಿದವರಾಗಿದ್ದಾರೆ. ಇವರ ತಂದೆ ಮೃದಂಗ ವಾದಕರು ,ಚಿಕ್ಕಪ್ಪ ಅರ್ಥಧಾರಿ ಮತ್ತು ಭಾಗವತರಾಗಿದ್ದರು. ಹಿರಿಯ ಸಹೋದರಿ ರಾಜೀವಿ ಎಂಬವರು ಸಂಗೀತ ಗಾರರಾಗಿದ್ದಾರೆ.ಹಾಗಾಗಿ ಇವರಲ್ಲಿ ಕಲಾಪ್ರತಿಭೆ ಚಿಗುರಿತು . ಧಾಮೋದರ ಮಂಡೆಚ್ಚರಿಂದ ಭಾಗವತಿಕೆಯ ಅಭ್ಯಾಸ ಹರಿನಾರಾಯಣ ಬೈಪಡಿತ್ತಾಯರಿಂದ ಮೃದಂಗದ ಅಭ್ಯಾಸವನ್ನು ಮಾಡಿದ್ದಾರೆ.ಚಿಕ್ಕಪ್ಪ ವಿಷ್ಣೂ ಅಮ್ಮಣ್ಣಾಯರ ಪ್ರೋತ್ಸಾಹದೊಂದಿಗೆ ಉತ್ತೇಜಿತರಾದ ಅಮ್ಮಣ್ಣಾಯರು ಯಕ್ಷಗಾನದ ಕಲಾಸಾಧನೆಯಲ್ಲಿ ಪ್ರೌಡಿಮೆಯನ್ನು ಸಾಧಿಸಿಬೆಳೆಯುತ್ತಾ ಬಂದರು.
ಪುತ್ತೂರು ಮೇಳದಲ್ಲಿ ಒಂದು ವರ್ಷ ಕರ್ನಾಟಕ ಮೇಳದಲ್ಲಿ 21ವರ್ಷ ,ಕದ್ರಿ ಮೇಳದಲ್ಲಿ ಎರಡು ವರ್ಷ ಕುಂಟಾರು ಮೇಳದಲ್ಲಿ ಎರಡು ವರ್ಷ ಎಡನೀರು ಮೇಳದಲ್ಲಿ ಐದು ವರ್ಷ ಹೀಗೇ ಮೇಳದಲ್ಲಿ ತಿರುಗಾಟದ ಹಿನ್ನೆಲೆ ಇದೆ. ಕರ್ನಾಟಕ ಮೇಳದಿಂದ ವರ್ಚಸ್ಸನ್ನು ಮೆರೆಸುತ್ತಾ ಬಂದ ಅಮ್ಮಣ್ಣಾಯರು ಈವರೇಗೂ ತಮ್ಮ ವರ್ಚಸ್ಸನ್ನು ಉಳಿಸಿ ಬೇಡಿಕೆಡಯ ಕಲಾವಿದರಾಗಿದ್ದಾರೆ. ಯಕ್ಷಕಲಾ ಪೊಳಲಿಯ ಸಂಘವನ್ನು ಸ್ಥಾಪಿಸಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಅಲ್ಲದೇ ಪೊಳಲಿಯಲ್ಲಿ ನಡೆದ ಯಕ್ಷ ಕಲಾ ಪೊಳಲಿಯ 30 ನೇ ಯಕ್ಷೋತ್ಸವದ 29ನೇ ಯಕ್ಷಗಾನದಲ್ಲಿ ಭಾಗವಹಿಸಿ ಭಾಗವತಿಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪೊಳಲಿಯಲ್ಲಿ ಅಭಿಮಾನಿಗಳನ್ನು ಹೊಂದಿದ ಅವರು ತುಳು ಮತ್ತು ಕನ್ನಡ ಪ್ರಸಂಗಗಳನ್ನು ಸಮರ್ಥವಾಗಿ ಆಡಿಸಬಲ್ಲ ಇವರು ರಾಗ ಸಂಯೋಜನೆಯಲ್ಲಿ ಪಳಗಿದವರಾಗಿದ್ದಾರೆ.ಕಂಠ ಮಾಧುರ್ಯದಿಂದಪ್ರೇಕ್ಷಕರ ಮನವನ್ನು ತಣಿಸುವ ಪ್ರೌಡ ಭಾಗವತರು ಅಮ್ಮಣ್ಣಾಯರವರು. ಕೃಷಿಕರಾಗಿರುವ ಇವರ ಪತ್ನಿ ಶ್ರೀಮತಿ ಸುಧಾ ರೊಂದಿಗೆ ಅಕ್ಷತಾ ಮತ್ತು ಅಮಿತಾ ಎಂಬ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.ಬಾಗವತಿಕೆಯ ಇವರ ಕಲಾಸಾಧನೆಗೆ ಪ್ರತಿಫಲವಾಗಿ 40ಕ್ಕು ಮಿಕ್ಕಿ ಸಂಮ್ಮಾನಗಳು ಸಂದಿವೆ.ಮುಂಬಯಿ,ಬೆಂಗಳೂರು,ಮಂಗಳೂರು ಸೇರಿದಂತೆಎಡನೀರು,ಉಡುಪಿ ಮೋದಲಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಕ್ಕೆ ಒಳಗಾಗಿದ್ದರು.
ಯಕ್ಷರಸರಾಗ ಚಕ್ರವರ್ತಿ,ಗಾನಕೋಗಿಲೆ,ಯಕ್ಷಕೋಗಿಲೆ,ಮಧುರಗಾನದ ಐಸಿರಿ,ಯಕ್ಷಸಂಗೀತ,ಕಲಾಕೌಸ್ತುಭ ಮುಂತಾದ ಬಿರುದುಗಳಿಂದ ಜನಮನ್ನಣೆಗೆ ಒಳಗಾಗಿರುವ ದಿನೇಶ್ ಅಮ್ಮನ್ನಾಯರ ಸಾಧನೆ ಔಚಿತ್ಯಪೂರ್ಣವಾಗಿದೆ.ಇತ್ತಿಚೇಗೆ ಅನಾರೋಗ್ಯದಿಂದ ಇದ್ದ ಅವರು ಗುರುವಾರ ನಿಧನಹೊಂದಿದರು. ಅವರ ನಿಧನಕ್ಕೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.



