ರೈ,ಪುನರೂರು ಅಭಿನಂದನಾ ಸಮಾರಂಭ: ಅಮಂತ್ರಣಪತ್ರ ಬಿಡುಗಡೆ
ಬಂಟ್ವಾಳ,: ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ನ. ೧೮ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದ ಅಮಂತ್ರಣ ಬಿಡುಗಡೆಯಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಡೆಯಿತು.

ಕಡೇಶ್ವಾಲ್ಯ ಶ್ರೀ ಚಿಂತಾಮಣಿ ಲಕ್ಷ್ಮೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಕಡೇಶ್ವಾಲ್ಯ ಅವರು ಅಮಂತ್ರಣಪತ್ರ ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಆಯೋಜಿಸಿರುವ ಅಬನಿನಂದನಾ ಸಮಾರಂಭ ಅತ್ಯಂತ ಯಶಸ್ವಿ ಹಾಗೂ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿದರು.
ಅಭಿನಂದನಾ ಗ್ರಂಥ ಸಮಿತಿ ಪ್ರಧಾನ ಸಂಚಾಲಕ ಪ್ರೋ. ರಾಜಮಣಿ ರಾಮಕುಂಜ,ಸಮಿತಿ ಪದಾಧಿಕಾರಿಗಳಾದ ರಾಮಗಣೇಶ್ ಪ್ರಭು ಕೈಕುಂಜ, ಗಣೇಶ್ ಕಾರಂತ್,ಸುಭಾಶ್ಷಂದ್ರ ಜೈನ್,ಸುಬ್ರಾಯರಾಮ್ ಮಡಿವಾಳ,ಕಿಶೋರ್ ಭಂಡಾರಿ,ರಮಾ ಎಸ್.ಭಂಡಾರಿ,ಜಯಾನಂದ ಪೆರಾಜೆ,ರಾಜಾ ಬಂಟ್ವಾಳ,
ಅಭಿನಂದನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವಿಸಿ,ಸ್ವಾಗತಿಸಿದರು. ಸಮಿತಿ ಪ್ರ.ಕಾರ್ಯದರ್ಶಿ
ದೇವಪ್ಪ ಕುಲಾಲ್ ವಂದಿಸಿದರು.



