ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಮಿತಿ ಅಧ್ಯಕ್ಷರಾಗಿ ಹರಿಕೃಷ್ಣ ಪಂಡಿತ್
ಬಂಟ್ವಾಳ:ತಾಲೂಕಿನ ಕುಮ್ಡೇಲು ಶ್ರೀನಾಗಬ್ರಹ್ಮ ಸನ್ನಿಧಿ ಶ್ರೀಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಮಿತಿ ಅಧ್ಯಕ್ಷರಾಗಿ ಹರಿಕೃಷ್ಣ ಪಂಡಿತ್ ಅವರು ಆಯ್ಕೆಯಾಗಿದ್ದಾರೆ.ದೈವಸ್ಥಾನದ ಪ್ರಾಂಗಣದಲ್ಲಿ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ
76 ನೇ ವಾರ್ಷಿಕ ನೇಮೋತ್ಸವದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

ಉಳಿದಂತೆ ಪದಾಧಿಕಾರಿಗಳಾಗಿ ಕಿರಣ್ ಕಾಪಿಕಾಡ್, ಶಾಶ್ವತ್ ತುಂಬೆ, ಜಗದೀಶ್ ಸುಜೀರ್,ಗೀತಾ ನವೀನ್ ಪೆಲಪಾಡಿ
( ಉಪಾಧ್ಯಕ್ಷರು),ಚಿಂತನ್ ಕುಮುಡೇಲ್ (ಕಾರ್ಯದರ್ಶಿ ),ಪ್ರಮೋದ್ ಕುಮ್ದೇಲ್(ಕೋಶಾಧಿಕಾರಿ),ಅರುಣ್ ಕುಮ್ದೇಲ್, ದಿವ್ಯೆಶ್, ಅವಿನಾಶ್, ಪ್ರಾರ್ಥನ್, ಧನರಾಜ್, ರಾಜೇಶ್, ಸ್ವಸ್ತಿಕ್, ವಿಜೇತ್( ಜತೆ ಕಾರ್ಯದರ್ಶಿಗಳು )ಶೇಖರ್ ಪಂಡಿತ್, ಗಣೇಶ್, ಗೌತಮ್, ಅಂಕಿತ್, ರಾಜೇಶ್ ಕೋಟ್ಯಾನ್, ಬ್ರಿಜೇಶ್ ಅಂಚನ್, ಪುನೀತ್ ಜೀವನ್ ಭಂಡಾರಮನೆ, ಚೈತ್ರ, ಶೋಭಾ(ಕಾರ್ಯಕಾರಿ ಸದಸ್ಯರು)ಆಯ್ಕೆಯಾಗಿದ್ದಾರೆ.
ಗುರಿಕಾರರಾದ ವೆಂಕಪ್ಪ ಕುಮ್ದೇಲ್, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾಗಿದ್ದ ಉಮೇಶ್ ಸಾಲಿಯಾನ್ ಬೆಂಜನಪದವು, ಉಮೇಶ್ ಶೆಟ್ಟಿ ಬರ್ಕೆ,ತೇವು ತಾರಾನಾಥ ಕೊಟ್ಟಾರಿ ಮೊದಲಾದವರಿದ್ದರು.ವಾರ್ಷಿಕ ನೇಮೋತ್ಸವವು 2026 ರ ಜ.03 ರಿಂದ 05 ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ



