Published On: Tue, Oct 14th, 2025

ಡಾ.ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿಯ ಯೋಜನೆಗಳು ನವ ಭಾರತದ ನಿರ್ಮಾಣದ ಅಡಿಪಾಯ: ಅಬ್ಬಾಸ್  ಆಲಿ

ಬಂಟ್ವಾಳ :ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿಯ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿ ನವ ಭಾರತದ ನಿರ್ಮಾಣದ ಅಡಿಪಾಯವಾಗಿದೆ .ಈ ಮೂಲಕ  ಗ್ರಾಮೀಣ ಪ್ರದೇಶದ  ಜನರು ತಮ್ಮ ಬದುಕು ಕಟ್ಟಿಕೊಂಡು  ಸುಬಿಕ್ಷ ಸಮಾಜ ನಿರ್ಮಿಸಿ ದೇಶ ಕಟ್ಟುವ ಕಾರ್ಯ ಮಾಡುತಿದ್ದು, ಅವರ ಯೋಜನೆ ಗಳಿಗೆ ನಾವು ಸಹಕಾರ ನೀಡಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.


ಭಾನುವಾರ ಬೋಳಂತೂರು ಹಾಲು ಉತ್ಪಾದಕರ ಸಂಘದ ಸಭಾಭವನದಲ್ಲಿ  ಜರಗಿದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.) ವಿಟ್ಲ  ಇದರ ಕಲ್ಲಡ್ಕ ವಲಯದ ಸ್ವ- ಸಹಾಯ ಸಂಘಗಳ ಬೋಳಂತೂರು  ಒಕ್ಕೂಟದ  20 ನೇ ವಾರ್ಷಿಕೋತ್ಸವ  ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.


ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು   ಒಕ್ಕೂಟದ  ಅಧ್ಯಕ್ಷರಾದ  ಸೀತಾ ರಾಮಚಂದ್ರ ಆಚಾರ್ಯ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷರಾದ  ಮಹಾಬಲ ರೈ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ಗ್ರಾಮಾಭಿವೃದ್ಧಿ ಯೋಜನೆ  ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ  ಬಂಟ್ವಾಳ ತಾಲೂಕಿನಲ್ಲಿ ಯೋಜನೆ ಆರಂಭಗೊಂಡು 20 ವರ್ಷಗಳಲ್ಲಿ ಮಾಡಿರುವ ಕಾರ್ಯ ಸಾಧನೆ ಹಾಗೂ ಯೋಜನೆ ಮೂಲಕ ಸಮುದಾಯಕ್ಕೆ ನೀಡಿದ ಸಹಕಾರವನ್ನು ಮೆಲುಕು ಹಾಕಿದರು.ಈ ಸಂದರ್ಭದಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿರುವ  ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ಗುರುತಿಸಿ ಗೌರವಿಸಲಾಯಿತಲ್ಲದೆ ಪ್ರತಿಯೊಬ್ಬರಿಗೂ  ಹೂವಿನ  ಸಸಿಯನ್ನು ವಿತರಿಸಲಾಯಿತು.


ಇದಕ್ಕು ಮೊದಲು  ಭಜನಾ ಸಂಕೀರ್ತನೆ ನಡೆಯಿತು.ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಬೋಳಂತೂರು ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ  ಚಂದ್ರಶೇಖರ್ ರೈ ನಾರ್ಶ್, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ  ಯೋಜನೆಯ   ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ,   ಕೆ ಎಂ ಎಫ್ ನಿರ್ದೇಶಕರಾದ ಸುಧಾಕರ ರೈ ಬೋಳಂತೂರು, ವಿಟ್ಲ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ,   ಸಿದ್ಧಿ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಮುತ್ತಪ್ಪ ಮೂಲ್ಯ, ಕುಶಲಕರ್ಮಿ ರಾಮಚಂದ್ರ ಆಚಾರ್ಯ, ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತರು ಒಕ್ಕೂಟ ಮಾಜಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ ಗುಂಡಿಮಜಲು, ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಬೋಳಂತೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಸದಾಶಿವ ನಾರ್ಶ್, ಬೋಳಂತೂರು ಅಂಚೆ ಮಾಸ್ಟರ್ ಜಯರಾಜ್ ಬೀರುಕೋಡಿ,  ಮಾಜಿ  ಅಧ್ಯಕ್ಷರಾದ ಇಂತ್ರು ಮಾಸ್ಕರೇಸ್,ಗೋಳ್ತಮಜಲು ಎ ಒಕ್ಕೂಟದ ಅಧ್ಯಕ್ಷೆ  ಮಮತಾ, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ವಿ ಮಾಡ, ಕೆಲಿಂಜ  ಒಕ್ಕೂಟದ ಅಧ್ಯಕ್ಷ  ದಯಾನಂದ ಗೌಡ, ವೀರಕಂಬ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಗೋಳ್ತಮಜಲು ಒಕ್ಕೂಟ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳಾದ , ಸುಧಾ ಮಣಿ  ಪುಷ್ಪ ಬಿ ಶೆಟ್ಟಿ ಜಯಶ್ರೀ ಪುರುಷೋತ್ತಮ, ಸೇವಾ ಪ್ರತಿನಿಧಿಗಳಾದ ಗಣೇಶ್, ವಿದ್ಯಾ, ವಿಜಯ, ಸುಕನ್ಯ, ರೇವತಿ, ಯಶೋದ, ಮೊದಲಾದವರು ಉಪಸ್ಥಿತರಿದ್ದರು.

ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ ಸ್ವಾಗತಿಸಿದರು, ಸೇವಾ ಪ್ರತಿನಿಧಿ ಲೀಲಾವತಿ   ವರದಿ ವಾಚಿಸಿದರು, ಒಕ್ಕೂಟ ಕಾರ್ಯದರ್ಶಿ ಚಂದ್ರಕಲಾ ವಂದಿಸಿದರು. ಮಮತಾ  ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter