ಬಂಟ್ವಾಳ: ಸಜೀಪ ನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಮಗ್ರ ಅಭಿವೃದ್ಧಿಯ ಅಂಗವಾಗಿ ಸಂಕಲ್ಪಿತ ಭೂದಾನ ಸೇವಾ ಕಾಣಿಕೆ ಹಾಗೂ ಮುಷ್ಟಿ ಅಕ್ಕಿ ಕಾಣಿಕೆ ಮತ್ತು ನಿತ್ಯ ಹೂಮಾಲೆ ಅಲಂಕಾರ ಸೇವೆ ಬಗ್ಗೆ ಸಜೀಪನಡು, ಪಡು ಗ್ರಾಮಗಳ ಭಗವದ್ಭಕ್ತರ ವಿಶೇಷ ಸಭೆ ದೇವಾಲಯದ ವಠಾರದಲ್ಲಿ ನಡೆಯಿತು.

ಇದೇ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ದೇವಳದ ಮೊಬೈಲ್ ತಂತ್ರಾಂಶ ಲೋಕಾರ್ಪಣೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕಟಿ.ಜಿ.ರಾಜಾರಾಮ್ ಭಟ್ ನೆರವೇರಿಸಿದರು.ಮೊಬೈಲ್ ತಂತ್ರಾಂಶವನ್ನು ಉಚಿತವಾಗಿ ಒದಗಿಸಿದ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ನ ಗೋಪಾಲಕೃಷ್ಣ ಭಟ್ ಮೊಬೈಲ್ ತಂತ್ರಾಂಶದ ಮಾಹಿತಿ ನೀಡಿದರು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಸುಬ್ರಹ್ಮಣ್ಯ ದೇವರ ಆರಾಧನೆಯ ಮಹತ್ವವನ್ನು ತಿಳಿಸಿದರು .
ನೌಕಾದಳದ ಮಾಜಿ ಸೇನಾನಿ ವಸಂತ ರಾವ್ ಭೂದಾನ ಕಾಣಿಕೆ ಸಮರ್ಪಣೆಯಲ್ಲಿ ಎಲ್ಲರೂ ಭಾಗಿಗಳಾಗುವಂತೆ ಕರೆ ನೀಡಿದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ರಾಧಾಕೃಷ್ಣ ಆಳ್ವ ಪ್ರಾಸ್ತಾವಿಸಿ, ಸ್ವಾಗತಿಸಿದರು.ಪ್ರಮೋದ್ ಕಾರ್ಯಕ್ರಮ ನಿರ್ವಹಿಸಿದರು.
