ಬಂಟ್ವಾಳ: ನವರಾತ್ರಿ ಉತ್ಸವ ಅಂಗವಾಗಿ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿಮಂಗಳವಾರ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.

ಅರ್ಚಕ ರಾಘವೇಂದ್ರ ಮಯ್ಯರಬೈಲು ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಜಿ.ಮಂಜುನಾಥ್ ಭಾಗವಹಿಸಿ ಜಗನ್ಮಾತೆ ಶ್ರೀ ದುರ್ಗಾ ದೇವಿಯ ಆಶೀರ್ವಾದದಿಂದ ಎಲ್ಲೆಡೆ ಸುಖ,ಶಾಂತಿ, ನೆಮ್ಮದಿನೆಲೆಸಲಿ ಎಂದು ಶುಭ ಹಾರೈಸಿ ಎಲ್ಲಾರಿಗೂ ನವರಾತ್ರಿ ಹಬ್ಬದ ಶುಭಾಶಯ ಕೋರಿದರು.ಉಪತಹಶೀಲ್ದಾರ್ ನರೇಂದ್ರ ನಾಥ್ ಮಿತ್ತೂರು.ನವೀನ್ ಬೆಂಜನಪದವು, ಶ್ರೀ ನಿಧಿ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳ, ಗ್ರಾಮ ಸಹಾಯಕರುಸಾರ್ವಜನಿಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
