ಬಂಟ್ವಾಳ : ತಾಲೂಕಿನ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಕಲ್ಲಡ್ಕ ವತಿಯಿಂದ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆಯುತ್ತಿರುವ 48ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಪ್ರಯುಕ್ತ ಮಂಗಳವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆ.ಶಾಂತರಾಮ್ ಆಚಾರ್ಯ ಕಲ್ಲಡ್ಕ  ಸ್ಮರಣಾರ್ಥ ಕಲಾ ಸೇವೆಗಾಗಿ ನೀಡುವ  “ಶಾಂತಶ್ರೀ ” ಪ್ರಶಸ್ತಿಯನ್ನು  ಭರತನಾಟ್ಯ ಕಲಾವಿದೆ ವಿದುಷಿ  ವಿದ್ಯಾ ಮನೋಜ್ ಅವರಿಗೆ  ಪ್ರದಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.ಅದೇರೀತಿ ವಿಶೇಷ ಸಾಧನೆಗಾಗಿ ವಿದ್ಯಾರ್ಥಿ ಜಗನ್ ಹಾಗೂ ಪತ್ರಕರ್ತ ಭರತ್ ರಾಜ್ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು.


ಉದ್ಯಮ ಕ್ಷೇತ್ರದ ಸಾಧಕರಾದ  ನಾಗರತ್ನ ಪುರ್ಲಿಪಾಡಿ ಹಾಗೂ ಶತಾಯಿಷಿ 104 ವರ್ಷದ ಶ್ರೀ ಅಯ್ಯಪ್ಪ ವೃತದಾರಿ  ಕಮಲ ಗುರುಸ್ವಾಮಿ ಕುಂಟಿಪಾಪು ರವರಿಗೆ “ಗ್ರಾಮ ಗೌರವ” ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್ ಎಚ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಅವರು ಧಾರ್ಮಿಕ ಉಪನ್ಯಾಸಗೈದು ಮಕ್ಕಳಿಗೆ ಮನೆಯಲ್ಲಿ  ಸಂಸ್ಕಾರ ನೀಡುವ ಕಾರ್ಯ ಹೆತ್ತವರಿಂದಾಗಬೇಕಲ್ಲದೆ   ಸ್ವದೇಶಿ ಭಾವದ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು. 


ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯ  ಜಗನ್ನಾಥ ಚೌಟ ಬದಿಗುಡ್ಡೆ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಚೆಂಡೆ, ಗೋಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಗೌಡ ಮಕ್ಕಾರ್, ಪ್ರಗತಿಪರ ಕೃಷಿಕ ಮಿಥುನ್ ಕುಮಾರ್ ಹೊಸಮನೆ, ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಯತಿನ್  ಕುಮಾರ್ ಏಳ್ತಿಮಾರು  ಸ್ವಾಗತಿಸಿ, ಕಾರ್ಯದರ್ಶಿ ವಜ್ರನಾಥ ಮಡ್ಲಮಜಲ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *