ಬಂಟ್ವಾಳ :ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ಯಕ್ಷ ಕಲಾ ಪೊಳಲಿ ಇದರ 30ನೇ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ”ತಿಂಶತ್ ಸಂಭ್ರಮ”ದಲ್ಲಿ ಖ್ಯಾತ ಹೃದ್ರೋಗ ತಜ್ಞ ಹಾಗೂ ಕಲಾ ಪೋಷಕ ಡಾ ಪದ್ಮನಾಭ ಕಾಮತ್ ಅವರಿಗೆ “ಪೊಳಲಿ ಯಕ್ಷೋತ್ಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮನಾಭ ಕಾಮತ್ ಅವರು,ಪೊಳಲಿ ಶ್ರೀ ದೇವಿಯ ಸಾನಿಧ್ಯದಲ್ಲಿ ಜೀವಮಾನದ ಶ್ರೇಷ್ಠ ಪ್ರಶಸ್ತಿ ಅನುಗ್ರಹವಾಗಿದೆ ಇದು ನನ್ನ ಭಾಗ್ಯ, ನನ್ನ ವೃತ್ತಿ ಜೀವನದಲ್ಲಿ ಸಿಕ್ಕಿದ ಪ್ರಶಸ್ತಿಗಿಂತಲೂ ಮಿಗಿಲಾದುದು,ವೈದ್ಯಕೀಯ ವೃತ್ತಿಯ ಜೊತೆಗೆ ಯಕ್ಷಗಾನ ಕಲೆ ಮತ್ತು ಕಲಾವಿದರ ಬಗ್ಗೆ ಗಮನಿಸುತಿದ್ದು, ಯಕ್ಷಗಾನ ಕಲಾವಿದರು ನಿಗದಿತ ಸಮಯದಲ್ಲಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರೋಗ್ಯದ ಕಡೆಗೆ ಒತ್ತು ನೀಡಬೇಕು ಎಂದರು.


ಹಿರಿಯ ಕಲಾವಿದರಿಗೆ ಗೌರವ:
ಅದೇರೀತಿ13ಮಂದಿ ಹಿರಿಯ ಯಕ್ಷಗಾನ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ,ಮಾಂಬಾಡಿ ಸುಬ್ರಮಣ್ಯ ಭಟ್,ಆಡೂರ್ ಲಕ್ಷ್ಮೀ ನಾರಾಯಣ ರಾವ್,ಕೊಳ್ತಿಗೆ ನಾರಾಯಣ ಗೌಡ,ಉಬರಡ್ಕ ಉಮೇಶ್ ಶೆಟ್ಟಿ,ಜಬ್ಬಾರ್ ಸಮೋ ಸಂಪಾಜೆ,ಡಾ ವಸಂತ್ ಕುಮಾರ್ ಪೆರ್ಲ,ಗಿರೀಶ್ ಹೆಗ್ಡೆ ಪುತ್ತೂರು, ಜಾಗದಭಿರಾಮಸ್ವಾಮಿ ಪಡುಬಿದ್ರಿ,ನಾ ಕಾರಂತ ಪೆರಾಜೆ, ನಗ್ರಿ ಮಹಾಬಲ ರೈ, ಶಿವರಾಮ್ ಪಣಂಬೂರು,ಮಹಾಬಲೇಶ್ವರ ಬಾಗಮಂಡಲ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.


ಹಾಗೆಯೇ ಯಕ್ಷಗಾನ ಸಂಘಟನೆಗಳಾದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಹಾಗೂ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಗೆ  ಯಕ್ಷಕಲಾ ಗೌರವ ನೀಡಿ ಗೌರವಿಸಲಾಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಕೊಡಿಮಜಲು ಅನಂತಪದ್ಮನಾಭ ಉಪಾಧ್ಯಯ ವಹಿಸಿದ್ದರು.
ಪೊಳಲಿ ರಾಮಕೃಷ್ಣ ತಪೋವನದ ವಿವೇಕಾಚೈತನ್ಯಾನಂದ ಸ್ವಾಮಿ ಆಶೀರ್ವಾಚನ ನೀಡಿದರು.
ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕ ಮಾಧವ ಭಟ್ ಪೊಳಲಿ,ಖ್ಯಾತ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ,
ಭುಜಬಲಿ ಧರ್ಮಸ್ಥಳ,ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಭಾಕರ ಸುವರ್ಣ ಕರ್ನಿರೆ,ಬಿಲ್ಲವಾಸ್ ದುಬೈ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು,  ಕಲಾ ಪೋಷಕ ರಾಜೇಂದ್ರ ಕಕ್ಯಪದವು,ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಅರ್ಚಕ ನಾರಾಯಣ ಭಟ್ ಪೊಳಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಉಜಿರೆ ಅಶೋಕ ಭಟ್ ಅಗಲಿದ ಕಲಾವಿದರ ಸಂಸ್ಕರಣೆ ನೆರವೇರಿಸಿದರು.
ಕದ್ರಿ ನವನೀತ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.ಸನ್ಮಾನಿತರ ಪರವಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅನಿಸಿಕೆ ವ್ಯಕ್ತಪಡಿಸಿದರು.
ಬೆಳಿಗ್ಗೆ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ಯಕ್ಷಗಾನ ವಿದ್ವಾಂಸ ಡಾ ಎಂ ಪ್ರಭಾಕರ ಜೋಶಿ ಅವರು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಯಕ್ಷ ಕಲಾ ಪೊಳಲಿ ಸಂಸ್ಥಾಪಕ ಅ ನ ಭ ಪೊಳಲಿ, ಸುಬ್ರಾಯ ಕಾರಂತ, ಶ್ರೀಕಾಂತ್ ಎಡಪಪದವು, ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರೆ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿದರು,ಸಂಯೋಜಕ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.
ಬೆಳಿಗ್ಗೆ  ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ  ಯಕ್ಷಗಾನ ಬಯಲಾಟ ನಡೆದರೆ ರಾತ್ರಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ ಇವರಿಂದ ಮಧುರಾ ಮಹೀಂದ್ರ ಎಂಬ ಬಡಗುತಿಟ್ಟಿನ ಯಕ್ಷಗಾನ ಬಯಲಾಟ ನಡೆಯಿತು

By Suddi9

Leave a Reply

Your email address will not be published. Required fields are marked *