ಬಂಟ್ವಾಳ :ತಾಲೂಕಿನ ಇರ್ವತ್ತೂರು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಂಟು ಗ್ರಾಮಗಳ ವ್ಯಾಪ್ತಿಯ ಕ್ಷಯರೋಗಿಗಳಿಗೆ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ ಯೋಜನೆಯಡಿ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಖತೀಜಾ ದಿಲ್‌ಶದ್ ಅವರು ಕ್ಷಯರೋಗಿಗಳಿಗೆ ಕಿಟ್ ವಿತರಿಸಿ ಮಾತನಾಡಿ, ಕ್ಷಯರೋಗಿಗಳಿಗೆ ಪೌಷ್ಠಿಕಾಂಶವುಳ್ಳ ಆಹಾರ ದೊರಕಿದಾಗ ಶೀಘ್ರ ಗುಣಮುಖರಾಗಲು ಸಹಕಾರಿಯಾಗುತ್ತದೆ. ಕ್ಷಯ ಮುಕ್ತ ಭಾರತ ಯೋಜನೆಯಲ್ಲಿ ಸಂಘ, ಸಂಸ್ಥೆಗಳು ನಿಕ್ಷಯ ಮಿತ್ರರಾಗಿ ಪ್ರತೀ ತಿಂಗಳು ಪೌಷ್ಠಿಕಾಂಶ ಕಿಟ್‌ಗಳನ್ನು ನೀಡಲು ಮುಂದಾಗಬೇಕು.ಈ ನಿಟ್ಟಿನಲ್ಲಿ ಇರ್ವತ್ತೂರು ಶಾರದೋತ್ಸವ ಸಮಿತಿಯ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಪ್ರಾ.ಆ.ಕೇಂದ್ರ ವೈದ್ಯಾಽಕಾರಿ ಡಾ.ರಿತೇಶ್ ಶೆಟ್ಟಿ ಅವರು ಮಾತನಾಡಿ, ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗ ಹರಡದಂತೆ ಜಾಗೃತಿ ವಹಿಸುವುದು ನಾಗರೀಕರ ಕರ್ತವ್ಯ ವಾಗಿದೆ ಎಂದರು.
ಶ್ರೀ ಶಾರದೋತ್ಸವ ಸಮಿತಿ ಸಂಚಾಲಕ ಡಾ.ರಾಮಕೃಷ್ಣ ಎಸ್. ಅವರು ಮಾತನಾಡಿ, ಸಮಿತಿ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಕ್ಷಯ ರೋಗಿಗಳಿಗೆ ಕಿಟ್ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ.ಖತೀಜಾ ಅವರು ಶಾರದೋತ್ಸವ ಸಮಿತಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಉದ್ಯಮಿ ಯೋಗೀಶ ಪೂಜಾರಿ, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ನಿರ್ದೇಶಕ ಪ್ರಭಾಕರ ಪಿ.ಎಂ., ಮಹಮ್ಮದ್ ಶರೀಫ್, ನಿವೃತ್ತ ಅಂಚೆ ಪಾಲಕ ವೆಂಕಪ್ಪ ಮೂಲ್ಯ, ಸಮಿತಿ ಪದಾಽಕಾರಿಗಳಾದ ಸುಽಂದ್ರ ಶೆಟ್ಟಿ, ಪ್ರಶಾಂತ್ ಜೈನ್,ಹರೀಶ್ ಪೂಜಾರಿ, ಸತೀಶ್ ಕರ್ಕೇರಾ, ಸತೀಶ್ ಪೂಜಾರಿ, ಆರೋಗ್ಯ ಕೇಂದ್ರದ ಸಿಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.
ಕಿರಿಯ ಆರೋಗ್ಯ ನಿರೀಕ್ಷಣಾಽಕಾರಿ ಶಿವರಾಜ್ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕಿ ಸಂಧ್ಯಾ ಅವರು ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು
