ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಮತ್ತು ಬಂಟ್ವಾಳ  ರಘರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ವಿದ್ಯಾಗಿರಿ ಬಂಟ್ವಾಳ  ಇದರ ಸಂಯುಕ್ತಾಶ್ರಯದಲ್ಲಿ” ಕಬ್ ಬುಲ್ ಬುಲ್ಸ್, ಸ್ಕೌಟ್ ಗೈಡ್ “ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಗೈಡ್ ಆಯುಕ್ತ ಬಿ.ಮಹಮ್ಮದ್ ತುಂಬೆ ಅವರು ಈ ವಿಶೇಷ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು .ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್.ಬಿ ,  ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಮ್.ಡಿ.ಮಂಚಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಎರಡೂ ಸಂಸ್ಥೆಯ ಪ್ರಾಂಶುಪಾಲರು,ಕಬ್ ಮಾಸ್ಟರ್‌ಗಳು ಪ್ಲಾಕ್ ಲೀಡರ್‌ಗಳು, ಸ್ಕೌಟ್ ಮಾಸ್ಟರ್‌ಗಳು ಮತ್ತು  ಗೈಡ್ ಕ್ಯಾಪ್ಟನ್‌ಗಳು ಉಪಸ್ಥಿತರಿದ್ದರು.

ಮೂರು ದಿನಗಳ ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸಮಯ ಪ್ರಜ್ಞೆ,ಶಿಸ್ತು,ಸಹಜೀವನ ,ಪರಸ್ಪರ ಸಹಕಾರ, ನಾಯಕತ್ವ,  ಪ್ರಥಮ ಚಿಕಿತ್ಸೆ,ದಿಕ್ಸೂಚಿ,ಬೆಂಕಿ ಇಲ್ಲದೆ ಅಡುಗೆ ತಯಾರಿ, ಬಿ.ಪಿಸಿಕ್ಸ್,ಯೋಗ,ಸಮವಸ್ತ್ರ,ಧ್ವಜಸ್ತಂಭ ತಯಾರಿ,ಮ್ಯಾಪಿಂಗ್‌ನ ಮಹತ್ವವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಭೋಧಿಸಲಾಗುತ್ತದೆ.ಹೊರಸಂಚಾರ,ಆಶ್ರಮ ಭೇಟಿ ಮತ್ತು ಸೈಬರ್ ಕ್ರೈಮ್ ಕಾರ್ಯಕ್ರಮಗಳು ನಡೆಯಲಿದೆ.

 ವಿದ್ಯಾರ್ಥಿಗಳಾದ ಕುಮಾರಿ ದಿಯಾ.ಡಿ ಸ್ವಾಗತಿಸಿ,ಕುಮಾರಿ ಅಂಕಿತಾ ಆರ್ ನಾಯಕ್ ವಂದಿಸಿದರು.ಕುಮಾರಿ ಆಶ್ನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *