ಬಂಟ್ವಾಳ :ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಸೇವಾಭಾರತಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ
ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವು ಭಾನುವಾರ ನೆತ್ತರಕೆರೆಯ ದಿ.ವಿಠ್ಠಲ ಶೆಟ್ಟಿ ಮುಂಡಾಜೆಗುತ್ತು ಸಭಾಂಗಣದಲ್ಲಿ ನಡೆಯಿತು.


ಬಂಟ್ವಾಳ ತಾಲೂಕು ಸೇವಾಭಾರತಿಯ ಅಧ್ಯಕ್ಷ, ಹಿರಿಯ ವಕೀಲ ರಮೇಶ ಉಪಾಧ್ಯಯ ಮಾತನಾಡಿ,ಇನ್ನೊಬ್ಬರ ಜೀವ ಉಳಿಸುವ ರಕ್ತದಾನದಂತಹ ಶ್ರೇಷ್ಠ ಸೇವಾ ಚಟುವಟಿಕೆಯನ್ನು ಆಯೋಜಿಸಿದ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮಂಗಳೂರುಕೆ ಎಂ ಸಿ.ಯ ಬ್ಲಡ್ ಸೆಂಟರ್ ನ ಜೂನಿಯರ್ ಎಕ್ಸಿಕ್ಯೂಟಿವ್ ಡಾ ರಾಘವೇಂದ್ರ ಅವರು ರಕ್ತದಾನದ ಮಹತ್ವ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.ಹೊಳ್ಳರ ಬೈಲು ಶ್ರಾವ್ಯ ಗೋ ಮಂದಿರದ ನಾರಾಯಣ ಹೊಳ್ಳ ನೆತ್ತರಕೆರೆಗುತ್ತು, ಗುತ್ತಿಗೆದಾರ ಅಶ್ವಿನ್ ಮುಂಡಾಜೆ ಇವರು ರಕ್ತದಾನಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ನೆತ್ತರಕೆರೆ, ಗೌರವಾಧ್ಯಕ್ಷ ಪಿ. ಸುಬ್ರಮಣ್ಯ ರಾವ್, ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಬಬಿತಾ ಅಶ್ವಿನ್ ವೇದಿಕೆಯಲ್ಲಿದ್ದರು.

ಪ್ರಮುಖರಾದ ಸುರೇಶ ಭಂಡಾರಿ ಅರ್ಬಿ, ಸಂತೋಷ್ ಕುಮಾರ್, ಜಗದೀಶ ಬಂಗೇರ, ವಿಶ್ವನಾಥ ಕುಲಾಲ್, ಸುರೇಶ ಕುಲಾಲ್, ಮಹೇಶ್ ಎನ್, ರಂಜಿತ್, ಮೋಹನ್ ಕುಲಾಲ್, ಮೋಹನ್ ಆಚಾರಿ, ಹರಿನಾಕ್ಷಿ ಸದಾನಂದ, ಸವಿತಾ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು.

ಸೇವಾಭಾರತಿ ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿ,ವಂದಿಸಿದರು. ನವೋದಯ ಮಿತ್ರ ಕಲಾ ವೃಂದದ ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸುಮಾರು 53ಮಂದಿ ರಕ್ತದಾನ ಮಾಡಿದರು

By suddi9

Leave a Reply

Your email address will not be published. Required fields are marked *