ಬಂಟ್ವಾಳ:  ತಾಲೂಕಿನ ಕಾವಳ ಮುಡೂರು ಗ್ರಾಮ ಪಂಚಾಯಿತಿಗೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದರು.ಗ್ರಾಮ ಪಂಚಾಯತು ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಪಿಡಿಒ ರಚನ್ ಕುಮಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರನ್ನು ಸ್ವಾಗತಿಸಿದರು.


ಬಳಿಕ ಅವರು ಕೇಂದ್ರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15 ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್, ಜಲಜೀವನ್ ಮಿಷನ್  ಮತ್ತು ರಾಜ್ಯ ಸರಕಾರದ ಬಸವ ವಸತಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆಯ ಪ್ರಗತಿಯ ಬಗ್ಗೆ ಚರ್ಚಿಸಿ ಪರಿಶೀಲಿಸಿದರು‌.


ನಮೂನೆ 9 -11ಎ , ಕಟ್ಟಡ ನಕ್ಷೆ ಅನುಮೋದನೆ,ಸ್ವಾಧೀನ ಪ್ರಮಾಣ ಪತ್ರ,ಕಟ್ಟಡ ತೆರಿಗೆ ಸಂಗ್ರಹಣೆ,  ಗ್ರಾಮ ಸಭೆ, ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿರುವ ಅಡಚಣೆ ಮತ್ತು  ಪಂಚಾಯತ್  ಆಡಳಿತದ ಉತ್ತಮ ಕಾರ್ಯಗಳ ಬಗ್ಗೆಯು ಮಾಹಿತಿ ಪಡೆದರು.


ಕಾವಳ ಮುಡೂರು  ಗ್ರಾಮ ಪಂಚಾಯತಿಯು ನರೇಗಾ ಮತ್ತು ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನ,ಸ್ವಂತ ನಿಧಿಯ ಸದ್ಬಳಕೆಯಲ್ಲಿ ಸಾಧಿಸಿರುವ  ಪ್ರಗತಿ,ಆಡಳಿತ ಮಂಡಳಿ, ಪಿ ಡಿ ಒ ಹಾಗೂ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು‌ ವಿ.ಪ.ಸದಸ್ಯ ಕಿಶೋರ್ ಕುಮಾರ್ ಪ್ರಶಂಶಿಸಿದರು.


ಒಣಕಸವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡುವಂತೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಅವರು ಸೂಚಿಸಿದರು.ನಂತರ ಗ್ರಾಮ ಪಂಚಾಯತ್ ನ ಬೇಡಿಕೆಯನ್ವಯ  ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಎನ್ .ಸಿ.ರಸ್ತೆಯಲ್ಲಿ  ರಿಕ್ಷಾ ತಂಗುದಾಣ ನಿರ್ಮಿಸುವ ಉದ್ದೇಶದಿಂದ ಅವರು ಸ್ಥಳ ಪರಿಶೀಲಿಸಿದರು. 

By suddi9

Leave a Reply

Your email address will not be published. Required fields are marked *