ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಐ ಸಪ್ತಾಹಕ್ಕೆ ಬಂಟ್ವಾಳ ತಾಲೂಕಿನಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣದ ಮೂಲಕ ಈಗಾಗಲೇ ಚಾಲನೆ ನೀಡಲಾಗಿದ್ದು,ಸೆ.15 ರಂದು ಸಂಪನ್ನಗೊಳ್ಳಲಿದೆ ಎಂದು ಜೋಡುಮಾರ್ಗ ನೇತ್ರಾವತಿ ಜೇಸಿಐ ಅಧ್ಯಕ್ಷೆ ತೃಪ್ತಿ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಪ್ತಾಹದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ಬಂಟ್ವಾಳ ಜೆಪಿಟಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ ತರಬೇತಿ,ನಿರುದ್ಯೋಗಿಗಳಿಗೆಕೌಶಲ್ಯಾಧಾರಿತ ಕಾರ್ಯಾಗಾರ,ಎಕ್ಸಿಮ್ ಡಾನ್ಸ್ ಸ್ಟೀವ್‌ನಲ್ಲಿ ಜುಂಬಾ ಸೆಷನ್ ಹಾಗೂ ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಅದೇರೀತಿ ಜೇಸಿಐ ವ್ಯವಹಾರ ರೀಲ್ ಮ್ಯಾರಥಾನ್, ವ್ಯವಹಾರ ನೆಟ್ವರ್ಕಿಂಗ್ ಸಭೆ, ಕರ್ತವ್ಯಕ್ಕಾಗಿ ಧ್ವನಿ” ಅಭಿಯಾನ, ಅಂತಾರಾಷ್ಟ್ರೀಯ ಮಾನವ ಕರ್ತವ್ಯಗಳ ಮನವಿಪತ್ರ ಸಹಿ ಅಭಿಯಾನ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಯುವಕ-ಯುವತಿಯರಿಗೆ ನಾಯಕತ್ವ ಮತ್ತು ಜಾಗತಿಕ ಪ್ರಭಾವ ಸೃಷ್ಟಿಸಲು ಪ್ರೇರೇಪಿಸುವ ಕಾರ್ಯಕ್ರಮ, ಸ್ನೇಹಿತರು, ಕುಟುಂಬ ಹಾಗೂ ಸಹೋದ್ಯೋಗಿಗಳಿಗೆ ಜೆಸಿಐ ಉದ್ದೇಶ ಮತ್ತು ನಾಯಕತ್ವ ತರಬೇತಿ ಕುರಿತ ಮಾಹಿತಿ,ಸಪ್ತಾಹದ ಕೊನೆ ದಿನದಂದು ಪ್ರತಿಭಾ ಪ್ರದರ್ಶನ ಹಾಗೂ ಸದಸ್ಯರಿಗೆ ‘ಗ್ರಾಟಿಟ್ಯೂಡ್ ಲೆಟರ್’ ವಿತರಣೆ ನಡೆಯಲಿದೆ ಎಂದರು.
ಜೋಡು ಮಾರ್ಗ ನೇತ್ರಾವತಿ ಜೇಸಿಐ ಘಟಕವು 1985 ರಿಂದ ಬಿ.ಸಿ ರೋಡ್ ಪರಿಸರದಲ್ಲಿ ಗುರುತಿಸಲ್ಪಟ್ಟು ಹಲವಾರು ನಾಯಕರು, ತರಬೇತುದಾರರನ್ನು ನೀಡಿದೆ. ತರಬೇತಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.
,ಸುದ್ದಿಗೋಷ್ಠಿಯಲ್ಲಿ ಜೇಸಿಐ ಪದಾಧಿಕಾರಿಗಳಾದ ಗಾಯತ್ರಿ ಲೋಕೇಶ್,ತೃಷಾ,ಜಯಾನಂದ ಪೆರಾಜೆ ಉಪಸ್ಥಿತರಿದ್ದರು
