ಮುಂಬಯಿ : ವಿಶ್ವ ಗಾಣಿಗಗರ ಚಾವಡಿ ಮಂಗಳೂರು ವತಿಯಿಂದ ನಡೆದ ಗೆನಾದ ತುಡರ್ ವಿತರಣೆ ಮತ್ತು ಉಚಿತ ವೈದ್ಯಕೀಯ ಶಿಭಿರವನ್ನು ಕಳೆದ ರವಿವಾರ (ಆ.೩೧) ರಂದು ಬಂಟ್ವಾಳದ ಸುಮಂಗಲ ಸಭಾಗ್ರಹದಲ್ಲಿಆಯೋಜಿಸಿದರು.

ಈ ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿz ಮುಂಬಯಿ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾ ಸಪಲ್ಯರು ಸಭೆಯನ್ನು ಉದ್ದೇಶಿಸಿ,  ಬದುಕನ್ನು ಅರ್ಥಪೂರ್ಣವಾಗಿ ಕಟ್ಟು ಹಾಗು ಜೀವನದ ಮೌಲ್ಯವನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸುವ ಶಿಕ್ಷಣ ಅಗತ್ಯ ಹಾಗು ಅದು ಮುಂದಿನ ಸಮಾಜದ ಏಳಿಗೆಗಾಗಿ ಕಾರಣೀ ಭೂತವಾಗಬಹುದು.  

ಕಷ್ಟದಲ್ಲಿ ಇರುವವರನ್ನು ಕಂಡು ನಮ್ಮ ಮನಸು ಮರುಗಿದರೆ ನಮ್ಮ ಹೆತ್ತವರು ಹೇಳುತ್ತಾರೆ ಜನ್ಮ ಸಾರ್ಥಕವಾಯಿತು ಎಂದು ಕಷ್ಟದಲ್ಲಿ ಇರುವವರನ್ನು ಗುರುತಿಸಿ ಸಹಾಯ ಮಾಡಲು ಮುಂದಾದರೆ ಭಗವಂತ ಹೇಳುತ್ತಾ ನೆನನ್ನ ಸೃಷ್ಟಿ ಸಾರ್ಥಕವೆಂದು ಕಳೆದ ಸುಮಾರು ವರುಷಗಳಿಂದ ಮುಂಬಯಿ ಹಾಗು ಊರಿನ ಬಡ ಬಗ್ಗ ವಿದ್ಯಾಥಿsಗಳಿಗೆ ಸಹಾಯಹಸ್ತ ನೀಡುತ್ತಾ ಬಂದಿರುವ ಇವರು ಈ ಕಾರ್ಯಕ್ರಮದಲ್ಲಿ ಸುಮಾರು ೪೦ ವಿದ್ಯಾಥಿsಗಳಿಗೆ ಗಾಣಿಗ ಸಂಸ್ಥೆ ವಿದ್ಯಾರ್ಜನೆಯ ಸಹಾಯ ತನ್ನ ಶ್ರೀನಿವಾಸ ಪೌಂಡೇಶನ್ ಮುಖೆನೇ ಸಹಾಯಹಸ್ತ ನೀಡಿ ಮಕ್ಕಳ ಬೆಳವಣಿಗೆಗೆ ಹಾಗು ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡಿದರು.

ಹಾಗು ವಿಶ್ವ ಗಾಣಿಗರ ಚಾವಡಿ ಮಂಗಳೂರು ಮಾಡುವ ವಿವಿಧ ಸಮಾಜ ಪರ ಕಾರ್ಯಗಳು ಪ್ರಶಂಸನೀಯ ಹಾಗು ಮನ್ನಣಿಯವೆಂದರು. ಈ ಸಂಸ್ಥೆಯ ಮುಖೇನ ಬಡ ಬಗ್ಗ ಜನರಿಗೆ ೩ ತಿಂಗಳು ಅಥವಾ ೬ ತಿಂಗಳಿಗೊಮ್ಮೆ ಮನೆಗೆ ಎರಡು ಹೊತ್ತು ಉಣಲು ಬೇಕಾಗುವ ಸಾಮಗ್ರಿಯನ್ನು ವಿಶ್ವ ಗಾಣಿಗರ ಸಂಸ್ಥೆ ಅನ್ನಭಾಗ್ಯ ಯೋಜನೆಯ ಮುಖೇನ ಪ್ರಾರಂಭಿಸಲು ಪ್ರೇರೇಪಿಸಿದರು ಹಾಗು ತನ್ನ ಸಂಪೂರ್ಣ ಸಹಾಯವನ್ನು ಶ್ರೀನಿವಾಸ ಪೌಂಡೇಶನ್ ಮುಖೇನ ಕೊಡುವ ಭರವಸೆಯನ್ನು ಇತ್ತರು.


ವೇದಿಕೆಯಲ್ಲಿ ಮುಂಬಯಿ ಸಾಫಲ್ಯ ಸಂಘದ ಕಾರ್ಯದರ್ಶಿ ಭಾಸ್ಕರ್ ಸಪಳಿಗ, ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಸಪಳಿಗ, ಕೋಶಾಧಿಕಾರಿ ಹೇಮಂತ ಸಪಳಿಗ, ಶ್ರೀಮತಿ ರತಿಕ ಸಪಳಿಗ, ಸುಮಂಗಲ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ನಾಗೇಶ ಕಲಡ್ಕ, ಉಪಾಧ್ಯಕ್ಷ ಸಚಿನ್ ಮೆಲ್ಕಾರ್,  ಬಂಟವಾಳ ಗಾಣಿಗರ ಸಂಘ ಇದರ ಉಪಾಧ್ಯಕ್ಷ ಭಾವನೇಶ ಸಪಳಿಗ ಮತ್ತು ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ವಿಶ್ವ ಗಾಣಿಗರ ಚಾವಡಿ ಮಂಗಳೂರು ಅಧ್ಯಕ್ಷ ಹರಿ ಪ್ರಸಾದ ಶಕ್ತಿನಗರ, ನಿವೃತ ಪೊಲೀಸ್ ಅಧಿಕಾರಿ ಮೋಹನ್ ಸಪಳಿಗ, ಸುಂದರ್ ಮೆಂಡನ್. ಗಣೇಶ್ ಕಲ್ಲೂರು  ಧನ್ಯವಾದವನ್ನು ಕೊಡುತ್ತ, ಬೆಳಿಗ್ಗೆಯಿಂದ ನಡೆದ ರಕ್ತದಾನ ಶಿಭಿರ, ಉಚಿತ ನೇತ್ರ ತಪಾಸಣೆ, ಕ್ಯಾನ್ಸರ್ ತಪಾಸಣೆ ಹಾಗು ಇತರ ವೈದ್ಯಕೀಯ ಪರೀಕ್ಷೆ ನಡೆಸಿಕೊಟ್ಟ ಚಿರವಿ ಆಪ್ಟಿಕಲ್ ಪಾಣೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸ್ಸಂಸ್ಥೆ, ಸರಕಾರಿ ಆಸ್ಪತ್ರೆ ಲೇಡಿ ಕೋಶನ್, ಫಾದರ್ ಮುಲ್ಲರ್ ಆಸ್ಪತ್ರೆಯಾ ಎಲಾ ತಂಡಕ್ಕೆ ಮತ್ತು ಅತಿಥಿsಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಶ್ರೀನಿವಾಸ ಸಾಫಲ್ಯರಿಗೆ ಧನ್ಯವಾದವನ್ನು ಇತ್ತರು. ಕುಮಾರಿ ಪಂಚಮಿ ನಳ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲಿಯುವ ವಿದ್ಯಾಥಿs ಪೆನ್ಸಿಲಿನಿಂದ ನಿರ್ಮಿಸಿದ ಶ್ರೀನಿವಾಸ ಸಾಪಲ್ಯರ ಭಾವಚಿತ್ರವನ್ನು ಅವರಿಗೆ ಅರ್ಪಿಸಿದಳು,. ಕುಮಾರಿ ದೀಕ್ಷಿತ ಶ್ರೀನಿವಾಸ ಸಪಲ್ಯ ಸಮಾಜಪರ ಕಾರ್ಯವನ್ನು ಹಾಗು ಅವರಿಗೆ ದೊರೆತ ಸನ್ಮಾನಗ ವಿವರವನ್ನು ಸಭೆಗೆ ತಿಳಿಸಿದಳು.

By suddi9

Leave a Reply

Your email address will not be published. Required fields are marked *