ಬಂಟ್ವಾಳ: ಮೆಲ್ಕಾರ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ “ಶ್ರೀಗುರು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ನಿಯಮಿತವು ಪ್ರಸಕ್ತ ಸಾಲಿನಲ್ಲಿ 190 ಕೋ.ರೂ.ವ್ಯವಹಾರ ನಡೆಸಿ,30 ಲ.ರೂ.ನಿವ್ವಳ ಲಾಭಗಳಿಸಿದೆ ಎಂದು ನಿಯಮಿತದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.

ನಿಯಮಿತದ ಮೆಲ್ಕಾರ್ ಕೇಂದ್ರ ಕಚೇರಿ ಅವರಣದಲ್ಲಿ ನಡೆದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಂಸ್ಥೆಯ 90 ಲಕ್ಷ ಪಾಲು ಬಂಡವಾಳವನ್ನು ಹೊಂದಿದ್ದು,20 ಕೋ.ರೂ.ವಿಗೂ ಅಧಿಕ ಸಾಲ ಹಂಚಿಕೆ ಮಾಡಿದೆ.ಈ ಸಂದರ್ಭ ಸದಸ್ಯರಿಗೆ ಶೇ.15 ಡಿವಿಡೆಂಟನ್ನು ಘೋಷಿಸಿದರು.

“ನಿಮ್ಮ ಸೇವೆಯೇ ನಮ್ಮ ಧ್ಯೇಯ” ಎನ್ನುವ ವೇದವಾಕ್ಯದೊಂದಿಗೆ ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುವ ಸಂಸ್ಥೆಯು ಗ್ರಾಹಕರ ವಿಶ್ವಾಸ,ನಂಬಿಕೆ ಮತ್ತು ಸಹಕಾರದಿಂದ ಒಂದು ಬಲಿಷ್ಠ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ಇದೇ ವೇಳೆ ಶೈಕ್ಷಣಿಕ ಸಾಧಕರಿಗೆ ವಿದ್ಯಾರ್ಥಿವೇತನ ಹಾಗೂ ಪ್ರಸ್ತುತ ಸಾಲಿನಲ್ಲಿ ಉತ್ತಮ ಸಾಧನೆಗೈದ ಸಂಘದ ಸದಸ್ಯರ ಸುಮಾರು 55 ಮಕ್ಕಳಿಗೆ ಪ್ರೋತಾಹಧನವನ್ನು ವಿತರಿಸಲಾಯಿತು.ನಿಯಮಿತದ ನಿರ್ದೇಶಕರುಗಳಾದ ಸಂಜೀವ ಪೂಜಾರಿ ಕುಚ್ಚಿಗುಡ್ಡೆ,ರತ್ನಾಕರ ಪೂಜಾರಿ ನಾಡಾರು,ರತ್ನಾಕರ ಪೂಜಾರಿ ಮೆಲ್ಕಾರ್,ಭುವನೇಶ್ ಪಚ್ಚಿನಡ್ಕ,ಹರೀಶ್ ಸಿ.ಎಚ್,ವಿಟ್ಲ,ತುಳಸಿ ಇರಾ,ಲಕ್ಷ್ಮೀ ಪೆರ್ವ ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚರಣ್ .ಕೆ ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿದರು.ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ವಂದಿಸಿದರು.ಶಾಖಾ ವ್ಯವಸ್ಥಾಪಕರು,ಸಿಬ್ಬಂದಿಗಳು ಸಹಕರಿಸಿದರು
