ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗ ಬೆಳ್ಳೂರು, ತೆಂಕ ಬೆಳ್ಳೂರು ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗವು ನಡೆಯಿತು.ಪಕ್ಚದ ಹಿರಿಯ ಕಾರ್ಯಕರ್ತರಾದ ಅನಂತರಾಮ್ ಹೇರಳ ತೆಂಕ ಬೆಳ್ಳೂರು ಹಾಗೂ ಶೀನ ಪೂಜಾರಿ ಬಡಗ ಬೆಳ್ಳೂರುಅವರು ಅಭ್ಯಾಸವರ್ಗವನ್ನು ಉದ್ಘಾಟಿಸಿದರು.

ಈ ಸಂದರ್ಭ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಮಾತನಾಡಿ, ಬಿಜೆಪಿ ಇಂದು ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯಲ್ಲಿರುವುದರ ಹಿಂದೆ ನಮ್ಮ ಹಿರಿಯರ ತ್ಯಾಗ, ಬಲಿದಾನಗಳಿವೆ. ವಿಶ್ವ ಮಾನ್ಯ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು,ಅದು ನನಸಾಗ ಬೇಕಾದರೆ ವೈಚಾರಿಕವಾಗಿ ಪ್ರಬುದ್ಧರಾದ ಸಶಕ್ತ ಕಾರ್ಯಕರ್ತರ ತಂಡ ಬೂತ್ ಮಟ್ಟದಲ್ಲಿ ಬೇಕಾಗಿದೆ.ಈ ನಿಟ್ಟಿನಲ್ಲಿ ವ್ಯಕ್ತಿತ್ವ ನಿರ್ಮಾಣದ ಉದ್ಧೇಶದಿಂದ ಅಭ್ಯಾಸ ವರ್ಗ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಮುಖರು ಸಂದೇಶ್ ಶೆಟ್ಟಿ, ಶಕ್ತಿ ಕೇಂದ್ರದ ಪ್ರಮುಖ ಚಂದ್ರ ಶೇಖರ್, ಬೂತ್ ಅಧ್ಯಕ್ಷರುಗಳಾದ ರಿತೇಶ್ ಶೆಟ್ಟಿ, ದಿನೇಶ್ ಬಟ್ಟಾಜೆ ಉಪಸ್ಥಿತರಿದ್ದರು.ಮೊದಲ ಅವಧಿಯಲ್ಲಿ ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆಯ ಬಗ್ಗೆ ಸಂದೇಶ್ ಶೆಟ್ಟಿ ಅವರು ಮಾಹಿತಿ ನೀಡಿದರು. ಗುಣಪಲ ಶೆಟ್ಟಿ ಪಲ್ಲಿಪಾಡಿ ಉಪಸ್ಥಿತರಿದ್ದರು.ಎರಡನೇ ಅವಧಿಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅವರು ಸಂಘಟನೆ ಹಾಗೂ ಸ್ಥಳೀಯಾಡಳಿತದ ಬಗ್ಗೆ ಮಾಹಿತಿ ನೀಡಿದರು. ರಮೇಶ್ ಬಟ್ಟಾಜೆ ಉಪಸ್ಥಿತರಿದ್ದರು.

ಮೂರನೇ ಅವಧಿಯಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರಾದ ಸುಧೀರ್ ಶೆಟ್ಟಿ ಕಣ್ಣೂರು ಅವರು” ವಿಕಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರೀಯತೆ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.ಬಡಗಬೆಳ್ಳೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ವೇದಾವತಿ ಈಶನಗರ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ, ಸಜಿಪ ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ್ ನಾವುಡ ಪೊಳಲಿ, ಬಿಜೆಪಿ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ, ಗ್ರಾಮ ಪಂಚಾಯತ್ ಸದಸ್ಯರಾದ ರಘುವೀರ್ ಗರ್ಗಲ್, ಮೋಹನ್ ದಾಸ್ ಕೊಟ್ಟಾರಿ,ಮಮತ ಪದ್ಮನಾಭ್ ಉಪಸ್ಥಿತರಿದ್ದರು. ಸಂದೀಪ್ ಕಮ್ಮಾಜೆ ಕಾರ್ಯಕ್ರಮವನ್ನು ನಿರ್ವಹಿಸಿದರು
