ಬಂಟ್ವಾಳ: ವಟಪುರಕ್ಷೇತ್ರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಶ್ರಾವಣಮಾಸದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿದ್ದು,ಈ ಸಂದರ್ಭ ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು.

ಯಕ್ಷಗಾನ ತಾಳಮದ್ದಳೆಯ ಕೊನೆಯ ದಿನದಂದು ನಡೆದ ಸರಳ ಸಮಾರಂಭದಲ್ಲಿ ಹಿರಿಯ ಅರ್ಥಧಾರಿ ,ಸಾಹಿತಿ ಪ್ರೋ.ಎಂ.ಎಲ್.ಸಾಮಗ ಹಾಗೂ ಹವ್ಯಾಸಿ ಭಾಗವತ ಶ್ರಿಧರ ಪೂಜಾರಿ ಬಂಟ್ವಾಳ ಅವರನ್ನುಸನ್ಮಾನಿಸಲಾಯಿತು.
ದೇವದಾಸ ಅರ್ಕುಳ ಮತ್ತು ವಾಮನ ಪಾಣೆಮಂಗಳೂರು ಅವರು ಸನ್ಮಾನ ಪತ್ರ ವಾಚಿಸಿದರು.ಈ ಸನ್ಮಾನ ಶ್ರೀ ತಿರುಮಲ ವೆಂಕಟರಮಣನ ಪ್ರಸಾದವಾಗಿದೆ ಎಂದು ಸನ್ಮಾನಿತರು ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಳದ ಆಡಳಿತ ಮೊಕ್ತೇಸರರಾದ ಅಶೋಕ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.ಅಧ್ಯಾಪಕ ಮುರಳೀಧರ ನೇರಂಕಿ ಸ್ವಾಗತಿಸಿದರು.ನಾಗೇಂದ್ರ ಪೈ ವರದಿ ವಾಚಿಸಿದರು.ವಸಂತಪ್ರಭು ವಂದಿಸಿದರು. ಸಂಕಪ್ಪ ಶೆಟ್ಟಿ ಸಂಚಯಗಿರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಜಿಲ್ಲೆಯ ಪ್ರಸಿದ್ದ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ “ಸೀತಾಪರಿತ್ಯಾಗ ಮತ್ತು ಗಂಗಾಸಾರಥ್ಯ” ಯಕ್ಷಗಾನ ತಾಳಮದ್ದಳೆ ನಡೆಯಿತು.
