ಬಂಟ್ವಾಳ: ಬಂಟ್ವಾಳ ‌ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬುಧವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದಾದ್ಯಂತ ನಡೆದ ಸುಮಾರು 40 ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಮುಂಜಾನೆ 5 ಗಂಟೆಗೆ ಒಡ್ಡೂರಿನ ತನ್ನ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ ಬಳಿಕ ಇವರು ತನ್ನ ವಿಧಾನ ಸಭಾ ಕ್ಷೇತ್ರದ ಮೂಲೆಮೂಲೆಗಳಲ್ಲಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಭೇಟಿ ನೀಡಿದರು.

ಗಂಜಿಮಠ ಮಹಾಗಣಪತಿ ದೇವಸ್ಥಾನ, ಫರಂಗಿಪೇಟೆ , ಸಜೀಪ ಕಂದೂರು ,ಮಂಚಿ, ಸಾಲೆತ್ತೂರು, ಕೊಳ್ನಾಡು ಕುಡ್ತಮುಗೇರು, ಕನ್ಯಾನದ ನೀರ್ಪಾಜೆ, ಕರೋಪಾಡಿಯ ಮಿತ್ತನಡ್ಕ, ಅನಂತಾಡಿ ಗ್ರಾಮದ ಕರಿಂಕ, ವೀರಕಂಭ ಗ್ರಾಮದ ಕೆಲಿಂಜ, ನೇರಳಕಟ್ಟೆ, ಪೆರಾಜೆ, ಕಡೇಶಿವಾಲಯ, ಬರಿಮಾರು, ಬಾಳ್ತಿಲದ ನೀರಪಾದೆ, ಬೊಂಡಾಲ, ಅಮ್ಟೂರು, ಕಲ್ಲಡ್ಕ ಶ್ರೀರಾಮ‌ಮಂದಿರ, ಗೋಳ್ತಮಜಲು, ನೆಟ್ಲ, ಬೋಳಂತೂರು, ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ, ಶಂಭೂರು, ಶೇಡಿಗುರಿ, ಬಿ.ಸಿ.ರೋಡು , ನಾವೂರ ವಿಷ್ಣು ಮೂರ್ತಿ ದೇವಸ್ಥಾನ, ಕೈಕುಂಜೆ, ಅಲ್ಲಿಪಾದೆ ಭಜನಾ ಮಂದಿರ, ಸರಪಾಡಿ ಶರಭೇಶ್ವರ ದೇವಸ್ಥಾನ, ಅಜಿಲಮೊಗರು , ಮುಲ್ಕಾಜೆಮಾಡ, ವಗ್ಗ ಕಾಡಬೆಟ್ಟು, ಕಾವಳಪಡೂರು ಮಧ್ವ, ಪುಂಜಾಲಕಟ್ಟೆ, ಪಿಲಾತಬೆಟ್ಟುವಿನ ನಯನಾಡು, ಮೂಡಪಡುಕೋಡಿ, ಇರ್ವತ್ತೂರು, ವಾಮದಪದವು, ಸಿದ್ದಕಟ್ಟೆ ಹೀಗೆ ಕೇತ್ರದ ವಿವಿಧ ಕಡೆಗಳಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.
ಸಂಘಟಕರು,ಕಾರ್ಯಕರ್ತರು,ಸ್ಥಳೀಯ ಪ್ರಮುಖರು ಶಾಸಕರನ್ನು ಸ್ವಾಗತಿಸಿದರು

By suddi9

Leave a Reply

Your email address will not be published. Required fields are marked *