ಬಂಟ್ವಾಳ : ಬಿಜೆಪಿಯ ಆರಂಬಿಕ ಕಾಲದಿಂದಲೂ ಅರಳ ಬಿಜೆಪಿಗೆ ಶಕ್ತಿ ತುಂಬಿದ ಗ್ರಾಮ. ಕಾರ್ಯಕರ್ತರ ಸಂಘಟಿತ ಬಲದಿಂದ ಕಳೆದ 35 ವರ್ಷಗಳಿಂದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿ ನಿರಂತರವಾಗಿ ಪಾರಮ್ಯವನ್ನು ಉಳಿಸಿಕೊಂಡು ಬಂದಿದೆ ಎಂದು ಪಕ್ಷದ ಹಿರಿಯ ಮುಖಂಡ ಜಗದೀಶ್ ಅಳ್ವ ತಿಳಿಸಿದ್ದಾರೆ.


ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅರಳ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು   ಸುಶಿಕ್ಷಿತ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಮೂಲಕ ಪಕ್ಷ ಸಂಘಟನೆಯನ್ನು ಬಲಿಷ್ಠ ಗೊಳಿಸುವ ಉದ್ಧೇಶದಿಂದ ಈ ಅಭ್ಯಾಸ ವರ್ಗ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.


ಮೊದಲ ಅವಧಿಯಲ್ಲಿ “ನಮ್ಮ ವಿಚಾರಗಳು ಮತ್ತು ಪಂಚ ಪರಿವರ್ತನೆಗಳು” ಎಂಬ ವಿಷಯದ ಬಗ್ಗೆ ಬಿಜೆಪಿ ಬಂಟ್ವಾಳ ಮಂಡಲ  ಅಧ್ಯಕ್ಷರಾದ ಚೆನ್ನಪ್ಪ ಆರ್.ಕೋಟ್ಯಾನ್ ಮಾಹಿತಿ ನೀಡಿದರು. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ  ಪುರುಷೋತ್ತಮ ಸಾಲಿಯಾನ್ ನರಿಕೊಂಬು ಅವರು ಎರಡನೇ ಅವಧಿಯಲ್ಲಿ “ಬೂತ್ ಸಂಘಟನೆ ಮತ್ತು ಸ್ಥಳೀಯಾಡಳಿತದಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಮೂರನೇ ಅವಧಿಯಲ್ಲಿ ರಾಜ್ಯ ಬಿಜೆಪಿ ನಾಯಕರಾದ  ವಿಕಾಸ್ ಪುತ್ತೂರು ಇವರು ” ವಿಕಸಿತ ಭಾರತದ ಅಮೃತ ಕಾಲ ಮತ್ತು ನಮ್ಮ ಸಕ್ರೀಯತೆ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.


ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಮಂಡಲದ  ಪ್ರಧಾನ ಕಾರ್ಯದರ್ಶಿ  ಶಿವಪ್ರಸಾದ್ ಶೆಟ್ಟಿ ಮಾತಾಡುತ್ತಾ ” ಬಿಜೆಪಿ ರಾಷ್ಟ್ರದಲ್ಲಿ ಸುಭದ್ರ ಸ್ಥಿತಿಯಲ್ಲಿರುವುದರ ಹಿಂದೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿವೆ. ವಿಶ್ವ ಮಾನ್ಯ ಭಾರತ ನಿರ್ಮಾಣ ನಮ್ಮ ಕನಸು. ಆ ಕನಸು ನನಸಾಗ ಬೇಕಾದರೆ ವೈಚಾರಿಕವಾಗಿ ಪ್ರಬುದ್ಧರಾದ ಸಶಕ್ತ ಕಾರ್ಯಕರ್ತರ ತಂಡ ಶಕ್ತಿಕೇಂದ್ರ ಮಟ್ಟದಲ್ಲಿ ಬೇಕಾಗಿದೆ. ಹಾಗಾಗಿ ವ್ಯಕ್ತಿತ್ವ ನಿರ್ಮಾಣದ ಉದ್ಧೇಶದಿಂದ ಈ ಅಭ್ಯಾಸ ವರ್ಗ ನಡೆಸಲಾಗಿದೆ ಎಂದರು.

ವೇದಿಕೆಯಲ್ಲಿ ಬಂಟ್ವಾಳ ಮಂಡಲ  ಉಪಾಧ್ಯಕ್ಷರಾದ ವಸಂತ ಕುಮಾರ್ ಅನ್ನಳಿಕೆ, ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ರೂಪಾ ಎಲ್.ಶೆಟ್ಟಿ, ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಡಿ.ಎಂ, ಮಂಡಲ ಕಾರ್ಯಕಾರಿಣಿ ಸದಸ್ಯ  ಲಕ್ಷ್ಮೀಧರ ಶೆಟ್ಟಿ, ಅರಳ ಶಕ್ತಿ ಕೇಂದ್ರ ಪ್ರಮುಖ್  ಸುಕುಮಾರ್ ಶೆಟ್ಟಿ, ಅರಳ ಗ್ರಾಮ ಪಂಚಾಯತ್ ಅಧ್ಯಕ್ಷೆ  ದೇವಕಿ(ಧನ್ಯ), ಬೂತ್ ಅಧ್ಯಕ್ಷರಾದ  ಸುನಿಲ್ ಕುಮಾರ್ ಶೆಟ್ಟಿ, ವಿಶ್ವನಾಥ ಪೂಜಾರಿ ತಡ್ಯಾಲ, ಕಿಶೋರ್ ಕುಮಾರ್ ಬಂಗೇರಬೆಟ್ಟು, ಮತ್ತು ಶ್ರೀಮತಿ ಆನುಪಮಾ ಶೆಟ್ಟಿ ಉಪಸ್ಥಿತರಿದ್ದರು.


ಅರಳ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ, ತುಂಗಮ್ಮ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರ ಪಂಬದಗದ್ದೆ, ಬೂತ್ ಕಾರ್ಯದರ್ಶಿಗಳಾದ ಮಂಜಪ್ಪ ಪಾಚಿಲೋಡಿ, ಯೋಗೀಶ್ ಕುಲಾಲ್ ಕಾಯರ್ದಡಿ, ಕೌಶಿಕ್ ನವಗ್ರಾಮ, ರಾಮ ಪೂಜಾರಿ ಅಂಗಡಿಗುತ್ತು, ಮುಂತಾದ ಪ್ರಮುಖರು ಪ್ರಶಿಕ್ಷಣದಲ್ಲಿ ಭಾಗವಹಿಸಿದರು. ಕುಮಾರಿ ಜ್ಞಾನಶ್ರೀ ಅರಳ ಪ್ರಾರ್ಥಿಸಿದರು. ಜಿಲ್ಲಾ ಬಿಜೆಪಿ ವಕ್ತಾರರಾದ  ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು. 

By suddi9

Leave a Reply

Your email address will not be published. Required fields are marked *