ಬಂಟ್ವಾಳ : ಇಲ್ಲಿಗೆ ಸಮೀಪದ ಕುದನೆವಾಸುಕೀವನ ಧರ್ಮಚಾವಡಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ವಿವಿಧ ಪೂಜಾಕೈಂಕರ್ಯಗಳು,ದೈವಗಳಿಗೆ ಗಗ್ಗರಸೇವೆ ನಡೆಯಿತು.


ಕ್ಷೇತ್ರದ ನಾಗದೇವರಿಗೆ ‘ಆಶ್ಲೇಷ ಬಲಿ ಪೂಜೆ’ಪರಿವಾರ ದೈವಗಳಿಗೆ ಪರ್ವ ಸೇವೆ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.ಸಂಜೆ ಅಣ್ಣಪ್ಪ ಪಂಜುರ್ಲಿ ದೈವದ ಭಂಡಾರ ಇಳಿದು ದೈವದ ‘ಗಗ್ಗರ ಸೇವೆ’ ನಡೆಯಿತು.


ಈ ಸಂದರ್ಭದಲ್ಲಿ‌ ಕ್ಷೇತ್ರದ ಶ್ರೀವರದರಾಜ್ ವಾಸುಕೀವನ, ಶ್ರೀ ಗುರುದತ್ತ ವಾಸುಕೀವನ, ಶ್ರೀ ಗುರುಮೂರ್ತಿ ನಂದಿಗಮ್ ,ಉದ್ಯಮಿ ಉಮಾಶಂಕರ್ ಬೆಂಗಳೂರು ಸಹಿತ ಹಲವಾರು ಗಣ್ಯರು ,ಗ್ರಾಮಸ್ಥರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *