ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಿ.ಮೂಡ ಶಕ್ತಿಕೇಂದ್ರದ ಅಭ್ಯಾಸ ವರ್ಗ ಭಾನುವಾರ ವ್ಯವಸಾಯ ಸೇವಾ ಸಹಕಾರಿ ಸಂಘ ದ ಸಭಾಭವನದಲ್ಲಿ  ನಡೆಯಿತು. ಪಕ್ಷದ ಹಿರಿಯ ಕಾರ್ಯಕರ್ತರು,ಮಾಜಿ ಪುರಸಭಾಸದಸ್ಯರಾದ ಗೋಪಾಲ್ ಸುವರ್ಣ, ರಮೇಶ್ ಶೆಣೈ ಬಿ.ಸಿ.ರೋಡು ಅವರು ಅಭ್ಯಾಸವರ್ಗವನ್ನು ಉದ್ಘಾಟಿಸಿ ಚಾಲನೆ ನೀಡಿದರು.


ಮಾಜಿ ಪಿರಸಭಾ ಸದಸ್ಯರಾದ ಮಹಾಬಲ ಶೆಟ್ಟಿ ಪಲ್ಲಮಜಲು,ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ್ ಪ್ರಭು , ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.ಬಿಜೆಪಿ ರಾಜ್ಯ ನಾಯಕಿಸುಲೋಚನಾ ಜಿ ಕೆ ಭಟ್ ,ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ , ಪ.ಕಾರ್ಯದರ್ಶಿ ಯತೀಶ್  ರವರು ಪ್ರಶಿಕ್ಷಣ ವರ್ಗದ ಅವಧಿ ಗಳನ್ನು ನಡೆಸಿಕೊಟ್ಟರು.


ಬಿಜೆಪಿ ನಾಯಕ ಸಂದೇಶ್ ಶೆಟ್ಟಿ ಅರೆಬೆಟ್ಟು ಅವರು ಸಮಾರೋಪ ಭಾಷಣಗೈದರು.  ಪುರಸಭೆಯ ಹಿರಿಯ ಸದಸ್ಯರಾದ ಎ. ಗೋವಿಂದ ಪ್ರಭು,ಹರಿಪ್ರಸಾದ್ ಭಂಡಾರಿಬೆಟ್ಟು,ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ,ಮಾಜಿ ಸದಸ್ಯರಾದ ಸುರೇಶ್ ಕುಲಾಲ್ ಬಂಟ್ವಾಳ,ಸುರೇಶ್ ಕುಮಾರ್ ಕೈಕಂಬ, ಜನಾರ್ಧನ ಬೊಂಡಾಲ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *