ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ 46 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಆ.27ರಿಂದ 30 ರವರೆಗೆ ವಿವಿಧ ವೈಧಿಕ ವಿಧಿ ವಿಧಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಿ ಸನ್ನಿಧಿಯ ಸಭಾಮಂಟಪದಲ್ಲಿ ನಡೆಯಲಿದೆ.

27 ರಂದು ಬೆಳಿಗ್ಗೆ ಧ್ವಜಾರೋಹಣದ ಬಳಿಕ ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ,ಮಧ್ಯಾಹ್ನ ಮಂಗಳಾರತಿ,ಸಂಜೆ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.28 ರಂದು ಬೆ.ಗಣಹೋಮ,ಮಧ್ಯಾಹ್ನ ಮಂಗಳಾರತಿ,ಸಂಜೆ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.29 ರಂದು ಬೆ.ಗಣಹೋಮ,ಮಧ್ಯಾಹ್ನ ಮಂಗಳಾರತಿ,ಸಂಜೆ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.30 ರಂದು ಬೆ.ಗಣಹೋಮ,ಮಧ್ಯಾಹ್ನ ಮಂಗಳಾರತಿ,ಬಳಿಕ ಅನ್ನ ಸಂತರ್ಪಣೆ, ಸಂಜೆ 3 ಗಂಟೆಗೆ ಮಹಾಪೂಜೆ,ಚಿಲಿಪಿಲಿಗೊಂಬೆ ಕುಣಿತ,4.30 ಕ್ಕೆ ವಿಸರ್ಜನಾ ಪೂಜೆ ಬಳಿಕ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ.
ವಾಮದಪದವಿನಲ್ಲಿ
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವಾಮದಪದವು ಇದರ 42 ನೇ ವರ್ಷದ ಶ್ರೀ ಗೌರಿಗಣೇಶೋತ್ಸವವು ವಾಮದಪದವಿನ ಶ್ರೀಗಣೇಶ ಮಂದಿರದಲ್ಲಿ ಆ.26, 28 ರ ವರೆಗೆ ಮೂರುದಿನಗಳ ಕಾಲ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ. 26 ರಂದು ಧ್ವಜಾರೋಹಣದ ಬಳಿಕ ಗೌರಿ-ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.ತದನಂತರ ಮಹಿಳೆಯರಿಂದ ಗೌರಿಪೂಜೆ,ಧಾರ್ಮಿಕ ಸಭೆ,ಮಹಾಪೂಜೆ,ಅನ್ನಸಂತರ್ಪಣೆ ,ಸಂಜೆ ಭಜನೆ,ರಾತ್ರಿ ಮಹಾಪೂಜೆಯ ಬಳಿಕಜಿಲ್ಲೆಯ ಸುಪ್ರಸಿದ್ದ ಅತಿಥಿ ಕಲಾವಿದರ ಕೂಡೂವಿಕೆಯಲ್ಲಿ ಕಾಲಮಿತಿ ಯಕ್ಷಗಾನ ನಡೆಯಲಿದೆ.
ಆ.27 ರಂದು ಪ್ರಾತ: ಪೂಜೆಯ ಬಳಿಕ ಧಾರ್ಮಿಕ ಸಭೆ,ಮಧ್ಯಾಹ್ನ ಮಹಾಪೂಜೆ,ಸಂಜೆ ಭಜನೆ,ರಾತ್ರಿ ಮಹಾಪೂಜೆಯ ನಂತರ ನೃತ್ಯೋತ್ಸವ ನಡೆಯಲಿದೆ.
28 ರಂದು ಬೆ.ಉಷಾಪೂಜೆ, ದೀಪೋತ್ಸವ, ಭಜನೆ,ಗಣಹೋಮ,ಸಮಾರೋಪ ಸಮಾರಂಭ,ಮಹಾಪೂಜೆ,ಅನ್ನಸಂತರ್ಪಣೆ,ಧ್ವಜಾವರೋಹಣ ಬಳಿಕ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ.
ರಾಯಿಯಲ್ಲಿ..
ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣಾ ಸಮಿತಿ ರಾಯಿ ಇದರ ಆಶ್ರಯದಲ್ಲಿ 14 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಆ.27,28 ರಂದು ರಾಯಿ ಪೇಟೆಯಲ್ಲಿ ಜರಗಲಿದೆ.
ಬೆಳಿಗ್ಗೆ ಗಣ್ಯರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು,ಬಳಿಕ ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಗಣಹೋಮ,ಭಜನೆ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ,ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ,ನಾಟಕ ನಡೆಯಲಿದೆ.
28 ರಂದು ಪ್ರಾತ: ಪೂಜೆ, ಸಭಾಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಯಕ್ಷ,ಗಾನ ವೈಭವ,ವಿಸರ್ಜನಾ ಪೂಜೆ,ಗಣೇಶನ ಶೋಭಾಯಾತ್ರೆ ನಡೆಯಲಿದೆ.
ಬರಿಮಾರಿನಲ್ಲಿ…
ಶ್ರೀ ಮಹಮ್ಮಾಯಿ ಸೇವಾಸಮಿತಿ,ಶ್ರೀದೇವಿಸೇವಾ ಟ್ರಸ್ಟ್ (ರಿ) ಬರಿಮಾರ್ ಇದರ ಆಶ್ರಯದಲ್ಲಿ 40 ನೇವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಆ.27,28 ರಂದು ಎರಡುದಿನಗಳ ಕಾಲ ನಡೆಯಲಿದೆ.
27 ರಂದು ಬೆ.ಕಾರ್ಯಕ್ತಮದ ಉದ್ಘಾಟನೆಯ ಬಳಿಕ ಶ್ರೀಗಣೇಶನ ವಿಗ್ರಹದ ಪ್ರತಿಷ್ಠಾಪನೆ ಯಾಗಲಿದ್ದು,ಪ್ರತಿಷ್ಠಸ ಪೂಜಾಸೇವೆ ನಡೆಯಲಿದೆ.ಬಳಿಕ ಭಜನೆ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ,ಸಂಜೆ ಪೂಜಾಸೇವೆ,ಭಜನೆ,ರಾತ್ರಿ ಪೂಜಾಸೇವೆ ಸ್ಥಳೀಯಪ್ರತಿಭೆಗಳಿಂದ ನೃತ್ಯ ವೈಭವ,ಯಕ್ಷಗಾನ ಬಯಲಾಟ ಇರಲಿದೆ.
28 ರಂದು ಬೆ.ಪೂಜಾಸೇವೆ,ಭಜನೆ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ,ಸಾಂಸ್ಕೃತಿಕ ಕಾರ್ಯಕ್ರಮ,ಸಭಾ ಕಾರ್ಯಕ್ರಮ ಸಂಜೆ ವಿಸರ್ಜನಾ ಪೂಜೆ ಬಳಿಕ ಗಣೇಶನ ವಿಗ್ರಹದ ಶೋಯಾತ್ರೆ ನಡೆಯಲಿದೆ.
