ಬಂಟ್ವಾಳ: ಬೆಂಜನಪದವಿನ ಶಿವಾಜಿನಗರದಲ್ಲಿಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ.)ಛತ್ರಪತಿ ಶಿವಾಜಿ ಶಾಖೆಯ ಆಶ್ರಯದಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯಿತು‌.


ಈ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವಹಿಸಿದರು,  ಸಾಹಿತಿ ಕೆ. ಕೆ.ಪೇಜಾವರ ಧಾರ್ಮಿಕ ಉಪನ್ಯಾಸ ನೀಡಿದರು.


ಸಹಕಾರ ರತ್ನ  ಚಿತ್ತರಂಜನ್ ಬೋಳಾರ್,ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು, ಆಕಾಶ್ ಎಚ್. ಕರ್ಕೇರ ಸುರತ್ಕಲ್, ಬಿ. ವಿ. ನಾಗರಾಜ್,ಕುಬೇರ ಅಡ್ಯಾರ್, ಈಶ್ವರ ಬೆಳ್ಚಡ ,ಧರ್ಮದರ್ಶಿ ರಮೇಶ್ ಬಿ., ಗೌರವಾಧ್ಯಕ್ಷರಾದ ಉಮೇಶ್ ಸಾಲ್ಯಾನ್ , ಅಧ್ಯಕ್ಷರಾದ ಭರತ್ ರಾಜ್ ಶಿವಾಜಿನಗರ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಬಿ,
ಪ್ರಧಾನ ಕಾರ್ಯದರ್ಶಿ ಎ ರಾಮಚಂದ್ರ ಆಚಾರ್ಯ, ಮಹಿಳಾ ಉಪಾಧ್ಯಕ್ಷೆ ಸುಪ್ರಿಯಾ ಪ್ರಕಾಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿಯಾದ ಸುಶನ್ ರವರು ಸ್ವಾಗತಿಸಿ ,ಜನಾರ್ಧನ ಅಮ್ಮುಂಜೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *