ಬಂಟ್ವಾಳ:ಸಮಾಜದಲ್ಲಿ ಕೆಳಸ್ತರದಲ್ಲಿರುವ ಮತ್ತು ಬಡತನದಿಂದ ಶಿಕ್ಷಣಕ್ಕೆ ಅಡ್ಡಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಮುಂಬೈ ಶ್ರೀನಿವಾಸ್ ಫೌಂಡೇಶನ್ ಸಂಸ್ಥೆಯು ಪ್ರತೀ ವರ್ಷ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ಮೊತ್ತದ ವಿದ್ಯಾರ್ಥಿ ಪ್ರೋತ್ಸಾಹಧನ ನೀಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಅವರಿಗೆ ಧೈರ್ಯ ತುಂಬುವ ಕಾಯಕವನ್ನು ವಿಶ್ವ ಗಾಣಿಗರ ಚಾವಡಿ ಮೂಲಕ ನಡೆಸುತ್ತಿದೆ ಎಂದು ಮುಂಬೈ ಸಾಫಲ್ಯ ಸೇವಾ ಸಂಘ ಮತ್ತು ಶ್ರೀನಿವಾಸ್ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ರಾಯಿ ಹೇಳಿದ್ದಾರೆ.

ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಮಂಗಳೂರು ವಿಶ್ವ ಗಾಣಿಗರ ಚಾವಡಿ ವತಿಯಿಂದ ಕಂಕನಾಡಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಭಾಗಿತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ‘ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಸಫಲ ಕ್ರೆಡಿಟ್ ಸೊಸೈಟಿ ನಿರ್ದೇಶಕ ಭಾಸ್ಕರ ಎಡಪದವು, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ನಾಯಕ್ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಕುಮಾರ್, ಪ್ರವೀಣ್ ಕುಮಾರ್, ವಿದ್ಯಾ ಮೊಹನ್, ರೈನಾ ಮಸ್ಕರೇನಸ್, ರಂಜನ್ ಎ.ವಿ., ವಿದ್ಯಾ ಪುಷ್ಪರಾಜ್ ಮಾಹಿತಿ ನೀಡಿದರು.ಮುಂಬೈ ಗಾಣಿಗ ಸಂಘದ ಕಾರ್ಯದರ್ಶಿ ಭಾಸ್ಕರ ಅಮೀನ್, ಮುಂಬೈ ಮಹಿಳಾ ಘಟಕ ಅಧ್ಯಕ್ಷೆ ರತಿಕಾ ಶ್ರೀನಿವಾಸ್, ವಿಜಿಸಿ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ಪ್ರಮುಖರಾದ ಕಿರಣ್ ಕುಮಾರ್ ಮುಂಬೈ, ಹೇಮಂತ್ ಮುಂಬೈ, ಬಿ.ಯೋಗೀಶ್ ಬಂಟ್ವಾಳ್, ಸುಂದರ ಮೆಂಡನ್ ಸೋಮೇಶ್ವರ, ಮೋಹನ್ ಉಳ್ಳಾಲ, ಬಾಲಕೃಷ್ಣ ಸೆರ್ಕಳ, ಭುವನೇಶ್ ಮೊಗನರ್ಾಡು, ಸಚಿನ್ ಮೆಲ್ಕಾರ್ ಮತ್ತಿತರರು ಇದ್ದರು.
ಇದೇ ವೇಳೆ ಮುಂಬೈ ಶ್ರೀನಿವಾಸ್ ಫೌಂಡೇಶನ್ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ‘ಗೇನದ ತುಡರ್ ನಿಧಿ’ ಶೈಕ್ಷಣಿಕ ನೆರವು ಹಸ್ತಾಂತರ, ವಿಜಿಸಿ ಸದಸ್ಯರಿಂದ ಗಾಣದ ಬದುಕು ಕಲಾಕೃತಿಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೀಕಾಂತ್ ಗಾಣಿಗ ಸ್ವಾಗತಿಸಿ, ಗಣೇಶ್ ಶಂಭೂರು ವಂದಿಸಿದರು. ವಿಜಯ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.
