ಬಂಟ್ವಾಳ:ಧರ್ಮ ವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮೊಸರು ಕುಡಿಕೆ ಉತ್ಸವ ಆಚರಣೆ ಮೂಲಕ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದು ಸಂಗಬೆಟ್ಟು ಗುತ್ತು ಉದಯ ಕುಮಾರ್ ಜೈನ್ ಹೇಳಿದ್ದಾರೆ.


ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಗೆಳೆಯರ ಬಳಗದ ವತಿಯಿಂದ ದಿವಂಗತ ಸದಾಶಿವ ಶೆಟ್ಟಿಗಾರ್  ವೇದಿಕೆಯಲ್ಲಿ  ನಡೆದ 8ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಅರ್ಚಕ ಗುಣಪಾಲ ಪರಾಡ್ಕರ್, ಮುಖ್ಯಶಿಕ್ಷಕಿ ವಿನಿತಾ ಅರ್ಕುಳ ಶುಭ ಹಾರೈಸಿದರು.


ಉದ್ಯಮಿ ಎಸ್. ಪಿ. ಶ್ರೀಧರ್,  ಸುರೇಶ್ ಸಾಲ್ಯಾನ್ ಮಂಚಕಲ್ಲು,  ಹರಿಶ್ಚಂದ್ರ ಪೂಜಾರಿ ಮಂಚಕಲ್ಲು, ಸಂಘದ ಅಧ್ಯಕ್ಷ ಸಂಪತ್ ದಾಸ್ ಮಂಚಕಲ್ಲು, ಸುಪ್ರೀತ್ ಪೂಜಾರಿ,  ದೇವರಾಜ್ ಸಾಲ್ಯಾನ್ ಮತ್ತಿತರರು ಇದ್ದರು. ಇದೆ ವೇಳೆ ಕೃಷ್ಣ ವೇಷ ಸ್ಪರ್ಧೆ, ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಜಯ ನಾಯ್ಕ್  ಸ್ವಾಗತಿಸಿ, ಶಾಶ್ವತ್ ಎಸ್. ಪಿ. ವಂದಿಸಿದರು. 

By suddi9

Leave a Reply

Your email address will not be published. Required fields are marked *