ಸುದ್ದಿ9 ಅಡ್ಯಾರ್: ಮಂಗಳೂರು ತಾಲೂಕಿನ ಅಡ್ಯಾರ್  ಒಳಚ್ಚಿಲ್ ಎಂಬಲ್ಲಿ ನಿರಂತರವಾಗಿ ಮರಳು ದಂಧೆ ನಡೆಯುತ್ತಿದ್ದು ಮಂಗಳೂರು ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ನ.12 ರಂದು ಶುಕ್ರವಾರ ಬೆಳ್ಳಗ್ಗಿನ ಜಾವ ದಾಳಿ ನಡೆಸಿ ಹಲವು ಲಾರಿಗಳನ್ನು ಹಾಗೂ  ಇಟೆಚ್ಚಗಳನ್ನು ಮರಳು ಸಮೇತ ವಶಪಡಿಸಿದ್ದಾರೆ.

ಅಡ್ಯಾರ್ ನ ವಳಚ್ಚಿಲ್ ಎಂಬಲ್ಲಿ ಹಲವಾರು ಸಮಯಗಳಿಂದ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದ್ದು ಈ ಬಗ್ಗೆ ಸ್ಥಳಿಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ಮಂಗಳೂರಿನ ತಹಶೀಲ್ದಾರ್ಮೋಹನ್ ಕುಮಾರ್ ಹಾಗೂ ಮಂಗಳೂರು ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತ್ರತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ  ಏಕಕಾಲಕ್ಕೆ ದಾಳಿ ನಡೆಸಿ ಹಲವು ಲಾರಿಗಳನ್ನು ವಶಪಡಿಸಿ ಮರಳನ್ನು ಮುಟ್ಟುಗೋಲು ಹಾಕಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ತನಿಖೆಯ ಬಳಿಕ ಅಕ್ರಮ ಎಂದು ತಿಳಿದುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ದಾಳಿ ಸಂದರ್ಭ 18 ಬೋಟ್ ಗಳು ಮರಳುಗಾರಿಕೆಯಲ್ಲಿ ನಿರತವಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈ ಬೋಟ್ ಗಳಿಗೆ ಬಳಸುತ್ತಿದ್ದ 10 ಬೋಟ್ ಎಂಜಿನ್, 7 ವಾಣಿಜ್ಯ ಗ್ಯಾಸ್ ಸಿಲಿಂಡರ್, ಒಂದು ಡೇಸರ್ ಎಂಜಿನ್ ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
IMG-20141212-WA0003

 

IMG-20141212-WA0004

 

IMG-20141212-WA0000

IMG-20141212-WA0002

By suddi9

Leave a Reply

Your email address will not be published. Required fields are marked *