ಬಂಟ್ವಾಳ : ತುಳುನಾಡಿನ ಖಾದ್ಯಗಳು ಆರೋಗ್ಯವರ್ಧಕವಾಗಿದ್ದವು,ಕಾಲಕಾಲಕ್ಕೆ ಅನುಗುಣವಾಗಿ ರೂಢಿಸಿಕೊಂಡಿರುವ ಆಹಾರ ಪದ್ಧತಿ ಶರೀರದ ಏರುಪೇರುಗಳನ್ನು ಸರಿಪಡಿಸುತ್ತಿದ್ದವು. ಹೀಗಾಗಿ ನಮ್ಮ ಪೂರ್ವಜರು ಆರೋಗ್ಯವಂತರಾಗಿ ದೀರ್ಘಕಾಲ ಬಾಳುತ್ತಿದ್ದರು. ಈಗಿನ ಆಹಾರ ಪದ್ಧತಿ ಅದಕ್ಕೆ ವಿರುದ್ಧವಾಗಿದ್ದು, ಕ್ಯಾನ್ಸರ್‌ನಂತಹ ಮಾರಕ ಖಾಯಿಲೆಗಳು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಂಡುಬರುತ್ತಿವೆ ಎಂದು ನ್ಯೂರೋಥೆರಪಿ ತಜ್ಞ ಮನೋಜಿತ್ ಕೆ.ವಿ. ಖೇದ ವ್ಯಕ್ತಪಡಿಸಿದರು.

ಕಳ್ಳಿಗೆ ಗ್ರಾಮದ ನೆತ್ತರಕೆರೆ ನೇತ್ರಾವತಿ ಮಾತೃಮಂಡಳಿ ವತಿಯಿಂದ ಭಾನುವಾರ ನೆತ್ತರಕೆರೆ ಸರ್ಕಾರಿ ಶಾಲೆಯ ದಿ.ವಿಠ್ಠಲ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನಡೆದ “ಆಟಿಡೊಂಜಿ ಗಮ್ಮತ್ತ್ “ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೇಸಮ್ಮಜ್ಜಿಯ ಪಾಡ್ದನ, ತುಳುಜನಪದ ಗೀತೆ, ತುಳುಭಾಷೆಯಲ್ಲಿ ವಿದ್ಯಾರ್ಥಿಗಳ ನಿರೂಪಣೆ ಗಮನಸೆಳೆಯಿತು.
ಮಾತೃಮಂಡಳಿ ಸದಸ್ಯರು ಮನೆಯಲ್ಲೇ ತಯಾರಿಸಿ ತಂದಂತಹ ತುಳುನಾಡಿನ ವಿವಿಧ ಖಾದ್ಯಗಳೊಂದಿಗೆ ಮಧ್ಯಾಹ್ನ ಮಾತೃಭೋಜನ ನಡೆಯಿತು.
ಮಾತೃಮಂಡಳಿ ಪದಾಧಿಕಾರಿಗಳಾದ ಲಲಿತಾ ಸುಂದರ್ ನೆತ್ತರಕೆರೆ, ಸುಶೀಲಾ ಶೇಖರ್, ಪ್ರಮುಖರಾದ ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ಪ್ರಕಾಶ್ಚಂದ್ರ ರೈ ದೇವಸ್ಯ, ಉಮೇಶ್ ಸಾಲ್ಯಾನ್ ಬೆಂಜನಪದವು, ಚೆನ್ನಪ್ಪ ಕೋಟ್ಯಾನ್, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಸತೀಶ್ ನಾಯ್ಗ ಕೊಡ್ಮಾಣ್, ವಿನೋದ್ ಕೊಡ್ಮಾಣ್, ಗ್ರಾಮ ವಿಕಾಸ ಮಂಗಳೂರು ವಿಭಾಗ ಸಂಯೋಜಕ ಜಿತೇಂದ್ರ, ಗಿರೀಶ್ ಶೆಟ್ಟಿ ಕುಂಪಣಮಜಲು, ದೇವದಾಸ್ ಶೆಟ್ಟಿ ಕೊಡ್ಮಾಣ್, ಅನಿಲ್‌ಪಂಡಿತ್ ವಳವೂರು, ನವೋದಯ ಮಿತ್ರಕಲಾ ವೃಂದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್, ಗೋಪಾಲ ಗೋವಿಂದೋಟ, ದಾಮೋದರ ನೆತ್ತರಕೆರೆ, ಬಿ. ಸುರೇಶ್ ಭಂಡಾರಿ ಅರ್ಬಿ, ದಿವಾಕರ ಶೆಟ್ಟಿ ಕುಪ್ಪಿಲ, ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ರಮಾನಂದ ಶೆಟ್ಟಿ ಬೆಂಜನಪದವು, ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಉಪಾಧ್ಯಕ್ಷೆ ವಾರಿಜ ರಮೇಶ್ ಚಂದ್ರಿಗೆ, ಮನೋಹರ ಕಂಜತ್ತೂರು, ಜಗದೀಶ್ ಎನ್., ಸಂತೋಷ್ ಎನ್., ಶೈಲಜಾ ಪಿ. ಶೆಟ್ಟಿ, ಪ್ರತಿಭಾ ಪಿ ಶೆಟ್ಟಿ, ದೇವಿಪ್ರಸಾದ್ ಎಂ ದೇವಂದಬೆಟ್ಟು, ಸುಧೀರ್ ಜಾರಂದಗುಡ್ಡೆ, ಚೇತನ್ ಮುಂಡಾಜೆ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಸಂತೋಷ್ ಕುಲಾಲ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಸಿಂಧೂ ಸ್ವಾಗತಿಸಿದರು. ಶ್ರಾವ್ಯ ವಂದಿಸಿದರು.
