ಬಂಟ್ವಾಳ: ನಾಡಿನೆಲ್ಲಡೆ ಮಂಗಳವಾರ ನಾಗರಪಮಚಮಿಯ ಸಡಗರ  ಬಂಟ್ವಾಳ ತಾಲೂಕಿನಲ್ಲು ವಿವಿಧ ದೇವಾಲಯ ಸಹಿತ ಅವರವರ ತರವಾಡು ಕುಟುಂಬಕ್ಕೆ ಸೇರಿದ ನಾಗನಕಟ್ಟೆ ಹಾಲೆರದು ತನು‌ಸಮರ್ಪಿಸಿ ಪೂಜೆ ಸಲ್ಲಿಸಿ ವಿನೀತರಾದರು.


ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ,ಶ್ರೀ ಚಂಡಿಕಾಪರಮೇಶ್ವರಿ ಮತ್ತು ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ
ದೇವಾಲಯ,ರಾಯಿ ಸಮೀಪದ ಬದನಡಿ,ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ,ಮಹಾಲಿಂಗೇಶ್ವರ,ಶ್ರೀ ವೈದ್ಯನಾಥ ಅರಸು ,ಧೂಮಾವತಿ ಬಂಟ ದೈವಸ್ಥಾನ , ಪಂಜಿಕಲ್ಲು ಗ್ರಾಮದ ಪುಂಚೋಡಿ ಚಿತ್ರಕೂಟ ನಾಗಬನದಲ್ಲಿ ನಾಗರಪಂಚಮಿ ವಿಶೇಷ ಪೂಜೆ ನಡೆಯಿತು.


ಪಣೋಲಿ ಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪ ಮೂಡ ಗ್ರಾಮದ ಮೀಸೆ ನಾಗಬನದಲ್ಲಿ,ಸಜೀಪಮುನ್ನೂರು ಶ್ರೀ ಮಹಾಕಾಳಿ ದೇವಸ್ಥಾನದ ಮಹಾಕಾಳಿ ಪಡ್ಪು ನಾಗಬನದಲ್ಲಿ ಫಲ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಸಹಿತ ನಾಗತಂಬಿಲ ಸೇವೆಯನ್ನು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ
ಅಚರಿಸಲಾಯಿತು.


ಅದೇರೀತಿ ಸಹಿತ ತರವಾಡು ಕುಟುಂಬ, ಜಾಗದ ,ಗ್ರಾಮದ ನಾಗದೇವರಿಗೆ ಹೀಗೆ  ನಾಗರಪಂಚಮಿ ಆಚರಿಸಲಾಯಿತು.ಮುಂಜಾನೆಯಿಂದಲೇ ಭಕ್ತರು ತಮಗೆ ಸೇರಿದ ನಾಗಬನಕ್ಕೆ ತೆರಳಲು ಬಿ.ಸಿ.ರೋಡಿನಲ್ಲಿ ಜನಜಂಗುಳಿಯೇ ಬಸ್,ಇತರೆ ವಾಹನಗಳಿಗೆ ಕಾಯುತ್ತಿದ್ದ ದೃಶ್ಯವು ಕಂಡು ಬಂತು.


ವಿಶೇಷವಾಗಿ ನಾಗನಿಗೆ ಪ್ರಿಯವಾದ ಹಾಲು, ಗೆಂದಳಿ ಸೀಯಾಳ, ಹಿಂಗಾರವನ್ನು, ಕೇದಿಗೆ, ಸಂಪಿಗೆ ಹೂ ಗಳನ್ನು ಬೆಳಗ್ಗಿನ ಹೊತ್ತು ಖರೀದಿಗೆ ಮುಗಿಬೀಳುತ್ತರುವುದು ಕಂಡು ಬಂತು.ವರುಣದೇವನು ಕೃಪೆ ತೋರಿದ್ದರಿಂದ ಎಲ್ಲಾ ದೇವಾಲಯ,ಕುಟುಂಬದ ನಾಗನಕಟ್ಟೆಯಲ್ಲಿ ಜನರು ಸಾಲುಗಟ್ಡಿ ನಿಂತು ದೇವರ ದರ್ಶನ ಪಡೆದರು.

By suddi9

Leave a Reply

Your email address will not be published. Required fields are marked *