ಬಂಟ್ವಾಳ:  ಕೃಷಿ ಗದ್ದೆಗಳು ಇಂದು ಕಣ್ಮರೆಯಾಗುತ್ತಿವೆ , ಸಾಂಪ್ರದಾಯಿಕ ವ್ಯವಸಾಯ ಮರೆಯಾಗುತ್ತಿದೆ  ಇಂದಿನ ಮಕ್ಕಳಿಗೆ ಗದ್ದೆಯ ಹೆಸರಿನ ಔಷಧಿಯ ಗುಣಗಳು ತಿಳಿಯಬೇಕಾಗಿದೆ, ನಲಿಯುತ್ತಾ ಕಲಿಯುವುದು ಮತ್ತು ಮನೋರಂಜನೆಯನ್ನು  ಪಡೆಯುವುದು ಕೆಸರು ಗದ್ದೆಯಲ್ಲಿ ನಡೆಯುವ ಕ್ರೀಡೆಗಳ ಮುಖ್ಯ ಅಂಗವಾಗಿದೆ. ಎಂದು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದರು.

ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ  ದಿವಂಗತ ಬಾಬು ಪೂಜಾರಿಯವರ  ಕುಮೇರು ಗದ್ದೆಯಲ್ಲಿ ನಡೆದ ” ಕೆಸರ್ದ ಕಂಡೋಡು ಕುಸಲ್ದ  ಗೊಬ್ಬುಲು” ಎಂಬ ನಾಲ್ಕನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಕ್ರೀಡಾಂಗಣ ಗದ್ದೆಗೆ ಹಾಲು ಏರೆದು ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.ಮಜಿ ವೀರಕಂಭ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ  ಸಿಂಗೇರಿ, ಮಾಜಿ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಕ್ಯಾಂಪ್ಕೋ ಉದ್ಯೋಗಿ ವಾಸು ನಾಯ್ಕ, ಉಪಸ್ಥಿತರಿದ್ದರು.

ಮಜಿ  ಶಾಲಾ ಮಕ್ಕಳು ಪ್ರಾರ್ಥಿಸಿ, ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ, ಗೋಪಾಲ ಗುಂಡಿಮಜಲು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಕೆಸರುಗದ್ದೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕ್ರೀಡಾಕೂಟದ ನಿರ್ಣಾಯಕರಾಗಿ ಶಿಕ್ಷಕಿ ಸಂಗೀತ ಶರ್ಮಾ  ಹಾಗೂ ಸತೀಶ್ ಅನಂತಾಡಿ ಸಹಕರಿಸಿದರು. ಕ್ರೀಡಾಭಿಮಾನಿಗಳಿಗೆ  ಮದ್ಯಾಹ್ನತುಳುನಾಡ ಶೈಲಿಯಭೋಜನ ವ್ಯವಸ್ಥೆ ಮಾಡಲಾಗಿತ್ತು.

By suddi9

Leave a Reply

Your email address will not be published. Required fields are marked *