ಬಂಟ್ವಾಳ: ಮಾತೆ ದೇಯಿ ಬೈದೆತಿ,ಕೋಟಿ- ಚೆನ್ನಯ್ಯರ ಆದರ್ಶಗಳ ಜೊತೆ ನಾಟಿ ವೈದ್ಯದ ವಿಶೇಷತೆಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ದೇಯಿ ಬೈದೆತಿ,ಕೋಟಿ- ಚೆನ್ನಯ್ಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಕೆಲಸ ಮಾಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ ಸಂಜೀವ ಪೂಜಾರಿ ಬಿರ್ವಹೇಳಿದ್ದಾರೆ.

ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆದದೇಯಿ ಬೈದೆತಿ,ಕೋಟಿ- ಚೆನ್ನಯ್ಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತಾಡಿದರು.ವಿಶ್ವದ ಬಿಲ್ಲವರನ್ನು ಸೇರಿಸಿಕೊಂಡು ಗೆಜ್ಜೆಗಿರಿ ಕ್ಷೇತ್ರದ ಪಕ್ಕದಲ್ಲಿ ಕ್ಷೇತ್ರಾಡಳಿತ ಸಮಿತಿ ಖರೀದಿಸಿದ ಜಮೀನಿನಲ್ಲಿ ಯಾತ್ರಿ ನಿವಾಸವನ್ನು ನಿರ್ಮಿಸುವ ಕುರಿತು ಮತ್ತು ಶೀಘ್ರವೇ ಶಂಕು ಸ್ಥಾಪನೆ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರಾದ ಪಿತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ವಾಸ್ತುತಜ್ಞ, ಅರ್ಕಿಟೆಕ್ಟ್ ಪ್ರಮಲ್ ಕುಮಾರ್ ಕಾರ್ಕಳ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರ್, ಟ್ರಸ್ಟ್ ಕೋಶಾಧಿಕಾರಿ ಹರೀಶ್ ಸಾಲ್ಯಾನ್ ಬಜಗೋಳಿ, ಪ್ರಮುಖರಾದ ಡಾ. ಸಂತೋಷ್ ಕುಮಾರ್ ಬೈರಂಪಲ್ಲಿ, ನಾರಾಯಣ ಮಚ್ಚಿನ,ರಾಜೇಂದ್ರ ಚಿಲಿಂಬಿ, ಜಯವಿಕ್ರಮ್ ಕಲ್ಲಾಪು, ಹರೀಶ್ ಕೆ ಪೂಜಾರಿ, ಕುಮಾರ್ ಇರುವೈಲ್, ಜಯರಾಮ್ ಪೂಜಾರಿ ಬೆಳುವಾಯಿ, ಜಯರಾಮ್ ಬಂಗೇರ ಹೆರಾಜೆ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು
