ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.)ವಿಟ್ಲ ಇದರ ಸ್ವ-ಸಹಾಯ  ಸಂಘಗಳ ಒಕ್ಕೂಟ ಬಾಳ್ತಿಲ ಹಾಗೂ ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು ಆಶ್ರಯದಲ್ಲಿ  “ಬಲೆ ಕೇಸರ್ಡ್ ಗೊಬ್ಬುಗ” ಕೆಸರುಗದ್ದೆ ಕ್ರೀಡಾಕೂಟ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಬೊಲ್ಪೊಡಿ ಗದ್ದೆಯಲ್ಲಿ ಭಾನುವಾರ ನಡೆಯಿತು.


ಕ್ರೀಡಾಕೂಟದ  ಗದ್ದೆಗೆ ಹಾಲು, ಸೀಯಾಳ  ಎರೆದು ಪುಷ್ಪ ಸಮರ್ಪಿಸುವ ಮೂಲಕ  ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಹಿಂದಿನ ಕೃಷಿ ಪರಂಪರೆಯನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ  ತಂತ್ರಜ್ಞಾನದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿ ಜಗನ್ ಹಾಗೂ ಅಂಗನವಾಡಿ ಸಹಾಯಕಿ ಜಯಂತಿ ಇವರನ್ನು ಅಭಿನಂದಿಸಲಾಯಿತು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ  ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ,ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ , ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ ಜಿನ್ನಪ್ಪ ಎಲ್ತಿಮಾರ್, ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷರ ಲೋಕಾನಂದ ಎಲ್ತಿಮಾರ್,  ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಬಾಳ್ತಿಲ ಒಕ್ಕೂಟದ ಅಧ್ಯಕ್ಷೆ ಉಮಾವತಿ, ಸೇವಾ ಪ್ರತಿನಿಧಿ ವಿದ್ಯಾ, ಗ್ರಾಮ ಸಹಾಯಕರಾದ ದಿವಾಕರ ಚೆಂಡೆ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ  ತಂಡದ ಅಧ್ಯಕ್ಷ ಮಾಧವ ಸಾಲಿಯಾನ್, ಬಿಜೆಪಿ ಎಸ್ ಸಿ ಮೋರ್ಚ ಬಂಟ್ವಾಳ ಅಧ್ಯಕ್ಷ ರಮೇಶ ಕುದ್ರೆ ಬೆಟ್ಟು,  ಬೂತ್ ಸಮಿತಿಯ ಅಧ್ಯಕ್ಷ ಕೇಶವ ಎಲ್ತಿಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಲತೀಶ್  ಕುರ್ಮನ್,ಆರೋಗ್ಯ ಇಲಾಖೆ ಲೋಕೇಶ್ ಮಪಾಲ, ಕಲಾವಿದರಾದ ರವಿ ಸಿಂಗೇರಿ, ಮಣಿಕಂಠ ಮಾತೃಶಕ್ತಿ ಅಧ್ಯಕ್ಷರಾದ ಸುಜಾತಾ ಎಂ,   ಕೇಶವ ಕುಧ್ರೆಬೆಟ್ಟು, ಧನರಾಜ್ ಶೆಟ್ಟಿ ಎಲ್ತಿಮಾರ್, ಸುಂದರ ಸಾಲಿಯಾನ್, ರವಿ ಬೈಲು, ಚಿನ್ನಾ ಮೈರಾ, ಕ್ರೀಡಾಕೂಟದ ಗದ್ದೆ ಮಾಲಕರಾದ ನೀಲಾಕ್ಷಿ, ಧರ್ಮಪ್ಪ ಪೂಜಾರಿ ಉಪಸ್ಥಿತರಿದರು.
ಭೋಜರಾಜ್ ಸ್ವಾಗತಿಸಿ  ಸುನೀಲ್ ಕುಮಾರ್ ,  ಸಂತೋಷ ಕುಮಾರ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳು, ಮಹಿಳೆಯರು, ಪುರುಷರಿಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳಾದ ಸ್ಪರ್ಧೆಗಳನ್ನು ನಡೆಸಲಾಯಿತು.
ಸ್ಪರ್ಧೆಯಲ್ಲಿ ಗ್ರಾಮಸ್ಥರ ಜೊತೆ ಆಂಧ್ರ ಪ್ರದೇಶ,ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮೂಲದ ಯುವಕರು ಸೇರಿಕೊಂಡು ಕೆಸರಲ್ಲಿ ಆಟ ಆಡಿ ಸಂಭ್ರಮಪಟ್ಟರು.
ಕ್ರೀಡಾ ಕೂಟದಲ್ಲಿ  ವಿಜೇತರಿಗೆ ಹಣ್ಣಿನ ಗಿಡ ಗಳನ್ನು  ಬಹುಮನವಾಗಿ ವಿತರಿಸಲಾಯಿತು.

By Suddi9

Leave a Reply

Your email address will not be published. Required fields are marked *