ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ)ಮಡಿಪು ಇದರ ವತಿಯಿಂದ” ವಿಶ್ವ ಭಾರತಿ ಯಕ್ಷ ಸಂಭ್ರಮ” ಪ್ರಯುಕ್ತ ಭಾರತ ದರ್ಶನ ಒಂಬತ್ತು ದಿನಗಳ ಸರಣಿ ತಾಳಮದ್ದಳೆಗೆ ಬಿ.ಸಿ.ರೋಡಿನಲ್ಲಿರುವ ತುಳು ಶಿವಳ್ಳಿ ಸೇವಾ ಟ್ರಸ್ಟ್ ಸಭಾಭವನದಲ್ಲಿ ಶನಿವಾರ ಸಂಜೆ ಚಾಲನೆನೀಡಲಾಯಿತು. ಯಕ್ಷ ದಶಾವತಾರಿ ಕೆ.ಗೋವಿಂದ ಭಟ್ ಅವರಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ,ವಸಂತ ಮಾಸ್ಟರ್ ಬಾಯಾರು,ನ್ಯಾಯವಾದಿ ಗಿರೀಶ್ ಮುಳಿಯಾಲ, ನಿವೃತ್ತ ಉಪತಹಶೀಲ್ದಾರ್ ಮೋಹನ್ ರಾವ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.ತುಳು ಶಿವಳ್ಳಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜಾರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಪ್ರಶಾಂತ್ ಕುಮಾರ್ ಹೊಳ್ದ ಸ್ವಾಗತಿಸಿದರು.ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು
