ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ ಶ್ರೀ ಗುರು ಪೂರ್ಣಿಮಾ ಉತ್ಸವ
ಬಂಟ್ವಾಳ:ಇಲ್ಲಿಯ ಬೈಪಾಸ್ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ.) ವತಿಯಿಂದ ಶ್ರೀ ನಿತ್ಯಾನಂದ ಹಾಗೂ ಗೋವಿಂದ ಸ್ವಾಮಿ ಮಂದಿರದಲ್ಲಿ ಶ್ರೀ ಗುರು ಪೂರ್ಣಿಮಾ ಉತ್ಸವವನ್ನು ಆಚರಿಸಲಾತು.

ಬೆಳಿಗ್ಗೆ ಮಂದಿರದ ಅರ್ಚಕರಾದ ಸತ್ಯನಾರಾಯಣ ಭಟ್,ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಗುರುದೇವರಿಗೆ ಸೀಯಾಳ ಅಭಿಷೇಕ ನಡೆದ ಬಳಿಕ ನಿತ್ಯ ಪೂಜೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಸಂಜೆ 4 ರಿಂದ ರಾತ್ರಿ 8-00ರವರೆಗೆ ಭಜನಾ ಸಂಕೀರ್ತನೆಯು ನೆರವೇರಿತು.ರಾತ್ರಿ ಮಹಾಪೂಜೆ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆಯು ನಡೆಯಿತು.ಈ ಸಂದರ್ಭ ಶ್ರೀ ದೇವರ ಗರ್ಭಗುಡಿಗೆ ಭಕ್ತಾದಿಗಳಿಗೆ ಪ್ರವೇಶವನ್ನು ಕಲ್ಪಿಸಲಾಯಿತು.
ಮಂದಿರದ ಅಧ್ಯಕ್ಷ ದಿನೇಶ್ ಭಂಡಾರಿ,ಪದಾಧಿಕಾರಿಗಳಾದ ಹರೀಶ್ ಕುಲಾಲ್,ಪ್ರದೀಪ್, ಸುರೇಶ್ ಕುಲಾಲ್,ಚೆನ್ನಕೇಶವ ಡಿ.ಆರ್.,ಸುಕುಮಾರ್,ಯಶವಂತ,ಗೋಪಾಲ್,ಯೋಗೀಶ್ ಕುಲಾಲ್ ,ವಿಜಯ ಕುಮಾರ್ ಕೊಡಿಯಾಲ್ ಬೈಲು ಮೊದಲಾದವರಿದ್ದರು.
ಬಡ್ಡಕಟ್ಟೆಯಲ್ಲು ಗುರುಪೂರ್ಣಿಮೆ:-
ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಗುರುವಾರ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರಬೈಲು, ಪ್ರಮುಖರಾದ ಗಜೇಂದ್ರ ಪ್ರಭು, ಸುಲೋಚನಾ ಜಕ್ರಿಬೆಟ್ಟು, ಜಗದೀಶ ಭಂಡಾರಿ, ಹರೀಶ್ ಬಂಟ್ವಾಳ, ಮತ್ತಿತರರು ಇದ್ದರು.



