ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ನರಿಕೊಂಬು ಶಕ್ತಿ ಕೇಂದ್ರ 117ನೇ ಬೂತ್ ವತಿಯಿಂದ ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ಗುರುಗಳನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವಿಸಲಾಯಿತು.
ನರಿಕೊಂಬು ಗ್ರಾಮದ ಎಲಬೆ ಪೂವಪ್ಪ ಪೂಜಾರಿಯವರ ಪುತ್ರಿ ಶಿಕ್ಷಕಿ ಅಶ್ವಿನಿ ವಿವೇಕ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ನರಿಕೊಂಬು ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಪುರುಷೋತ್ತಮ ಸಾಲ್ಯಾನ್, ಬೂತ್ ಅಧ್ಯಕ್ಷರಾದ ಸುರೇಶ್ ಕುಲಾಲ್ ಶೇಡಿಗುರಿ, ಬೂತ್ ಕಾರ್ಯದರ್ಶಿ ನಾಗರಾಜ್ ಎಲಬೆ,ನರಿಕೊಂಬು ದ.ಕ. ಜಿ.ಪಂ. ಹಿ. ಪ್ರಾ. ಶಾಲಾಭಿವೃದ್ಧಿಸಮಿತಿ ಸದಸ್ಯರದ ಕಮಲಾಕ್ಷ ಭೀಮಗದ್ದೆ, ಪಕ್ಷದ ಪ್ರಮುಖರಾದ ಲೋಕೇಶ್ ಕಟ್ಟದಮುದೇಲು, ನವೀನ್ ಎಲಬೆ, ದಿರಾಜ, ರೇವತಿ ಪೂವಪ್ಪ ಪೂಜಾರಿ ಇತರರು ಉಪಸ್ಥಿತರಿದ್ದರು.
