ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ: ಇಲ್ಲಿನ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಶ್ರೀ ತಿರುಮಲ ವೆಂಕಟರಮಣ ದೇವಳದ ಸಭಾಂಗಣದಲ್ಲಿ ನಡೆಯಿತು.

ಶಾಲಾ ಸಂಚಾಲಕರಾದ ಬಿ.ಸುರೇಶ್ ವಿ.ಬಾಳಿಗಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು
ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 6 ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಶ್ರೀಶೈಲಾ ಮತ್ತು ಶಾಲೆಯ ಹಳೇ ವಿದ್ಯಾರ್ಥಿನಿ ಪಿಯುಸಿಯಲ್ಲಿ 10 ನೇ ರ್ಯಾಂಕ್ ಪಡೆದ ಯಶ್ವಿತಾ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ಹಾಗೂ ಪ್ರಸ್ತುತ ಸಾಲಿನಲ್ಲಿ ಶಾಲೆಗೆ ಶೇ.ನೂರು ಫಲಿತಾಂಶ ಬರುವಲ್ಲಿ ಶ್ರಮಿಸಿದ ಶಕ್ಷಕ,ಶಿಕ್ಷಕಿಯರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.ಅಡಳಿತ ಮಂಡಳಿ ಸದಸ್ಯ ಶಿವಾನಂದ ಬಾಳಿಗಾ ಅಭಿನಂದನಾ ಭಾಷಣಗೈದರು.
ಶಿಕ್ಷಕಿ ಲತಾ ಪೈ ೨೦೨೪-೨೫ ನೇ ಸಾಲಿನ ಆಯ-ವ್ಯಯ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿ’ಸೋಜ ಅವರು ಕಳೆದ ಸಾಲಿನ ಸಾಧನೆ,ಕಾರ್ಯಚಟುವಟಿಕೆಯ ವರದಿಯನ್ನು ವಾಚಿಸಿದರು.
ಆಡಳಿತ ಮಂಡಳಿ ಸದಸ್ಯರಾದ ವೆಂಕಟ್ರಮಣ ಶೆಣೈ,ಪಿ.ಪ್ರಕಾಶ್ ಕಿಣಿ,ಗಿರೀಶ್ ಪೈ ಬಿ.ಎಚ್.,ಸುಬ್ರಾಯ ನಾಯಕ್, ಸಿ.ಶ್ರೀನಿವಾಸ ಪೈ, ಭಾಮಿ ಲಕ್ಷ್ಮಣ ಶೆಣೈ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಅವರು ಉಪಸ್ಥಿತರಿದ್ದರು.
ಶಿಕ್ಷಕಿ ಸೀಮಾ ಎ. ಶೆಟ್ಟಿ ಸ್ವಾಗತಿಸಿದರು , ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಹಾಸ್ ಎಂ. ಕಾರ್ಯಕ್ತಮ ನಿರೂಪಿಸಿದರು. ಶಿಕ್ಷಕಿ ಕುಸುಮಾ ವಂದಿಸಿದರು.



