ಬಂಟ್ವಾಳ: ಪಂಜೆ ಸಾಹಿತ್ಯ ಸಂಘದ ಉದ್ಘಾಟನೆ,’ಲಹರಿ’ ಭಿತ್ತಿ ಪತ್ರಿಕೆ ಅನಾವರಣ ಹಾಗೂ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸಂಸ್ಮರಣಾ ಕಾರ್ಯಕ್ರಮ ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.


ಮೊಡಂಕಾಪು ದೀಪಿಜಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಹಾಬಲೇಶ್ವರ ಹೆಬ್ಬಾರ್ ಅವರು  ಪಂಜೆ ಸಾಹಿತ್ಯ ಸಂಘವನ್ನು ಉದ್ಘಾಟಿಸಿ,ಕಾಲೇಜು ವಿದ್ಯಾರ್ಥಿಗಳು ಸಿದ್ದಪಡಿಸಿದ ‘ಲಹರಿ’ ಭಿತ್ತಿಪತ್ರವನ್ನು ಅನಾವರಣಗೊಳಿಸಿದರು.ಬಳಿಕ ಮಾತನಾಡಿದ ಅವರು “ಶಿಶು ಸಾಹಿತಗಯದ ಜನಕ” ನೆಂದೇ ಹೆಸರಾದ ಬಂಟ್ವಾಳದ ಪಂಜೆಮಗೇಶರಾಯರು ಹೊಸಗನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ‌ಮಾದರಿಯೆನ್ನುವಂತಹ ಕೃತಿಗಳನ್ನು ನೀಡಿದ್ದರು.ವಿದ್ಯಾರ್ಥಿಗಳು ಅವರ ಸಾಹಿತ್ತವನ್ನು ಓದಿ ಸಂಭ್ರಮಿಸುವ ಅಗತ್ಯವಿದೆ.ಅವರ ಹೆಸರಿನಲ್ಲಿ‌ಸಾಹಿತಗಯ ಸಂಘವನ್ನು ಅಸ್ತಿತ್ವಕ್ಕೆ ತಂದಿರುವುದು ಸ್ತುತ್ಯಾರ್ಹವಾಗಿದೆ ಎಂದರು.


ಅಅತಿಥಿಯಾಗಿ ಭಾಗವಹಿಸಿದ್ದ ಮ್ಮುಂಜೆಬಗ್ರಾ.ಪಂ.ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ ಅವರು ಶುಭಹಾರೈಸಿದರು.
ಅತ್ಯತ್ಕೃಷ್ಟ ಸಾಹಿತ್ಯವನ್ನು ಕನ್ನಡನಾಡಿಗೆ ಸಮರ್ಪಿಸಿದ ಹಿರಿಯ ಸಾಹಿತಿ ದಿವಂಗತ  ಡಾ.ಎಚ್.ಎಸ್ .ವೆಂಕಟೇಶ್ ಮೂರ್ತಿ  ಅವರ ಸಂಸ್ಮರಣೆಯ ಪ್ರಯುಕ್ತ “ಭಾವಗಾಯನ” ಕಾರ್ಯಕ್ರಮವನ್ನು ಚಿನ್ಮಯಿ ವಿ.ಭಟ್  ಪ್ರಸ್ತುತಪಡಿಸಿದರು. ತಬಲಾದಲ್ಲಿ ಕೆ.ನರಸಿಂಹ ಭಟ್ ,ಹಾರ್ಮೋನಿಯಂ ನಲ್ಲಿ ಗೌರವ್ ಡಿ ಶೆಟ್ಟಿ, ಸಹಕರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಹೇಮಚಂದ್ರ ಪ್ರಸ್ತಾವನೆಗೈದರು.

ಉಪನ್ಯಾಸಕಿ ಕು.ಹರ್ಷಿತಾ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಅನಂತಪದ್ಮನಾಭ ರಾವ್,ಪ್ರತಿಭಾ ಪಡೀಲ್, ಉಪನ್ಯಾಸಕರಾದ ರವಿಚಂದ್ರ ಮಯ್ಯ, ಮೇ್ಪ್ಪ ಜಿ.ಆರ್., ಚಂದ್ರಶೇಖರ್ ,ಡಾ.ಸಂಧ್ಯಾರಾಣಿ,ಆಶಾ,ರಂಜನಿ,ಪ್ರತಿಮ ಉಪಸ್ಥಿತರಿದ್ದರು.ಉಪನ್ಯಾಸಕ ರಾಧೇಶ್  ತೋಳ್ಪಾಡಿ ಎಸದ ಕಾರ್ಯಕ್ರಮ ನಿರೂಪಿಸಿದರು. ಈಸಂದರ್ಭ “ನಾಡಪ್ರಭು ಕೆಂಪೇಗೌಡ”  ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದ್ವಿತೀಯ ಪಿಯುಸಿಯ ವಿಜ್ಞಾನವಿಭಾಗದ  ವಿದ್ಯಾರ್ಥಿ ತ್ರಿಶೂಲ್ ಮೊಯಿಲಿಯನ್ನು ಅಭಿನಂದಿಸಲಾಯಿತು.ಹಾಗೂ ಕಾಲೇಜು ಮಟ್ಟದಲ್ಲಿ ನಡೆದ “ಮಾದಕ ವ್ಯಸನ ಮುಕ್ತ ಸಮಾಜ” ಕುರಿತು ಏರ್ಪಡಿಸಲಾದ ಪ್ರಬಂಧಹಾಗೂ ಚಿತ್ರಕಲಾ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

By suddi9

Leave a Reply

Your email address will not be published. Required fields are marked *