ಬಂಟ್ವಾಳ : ದಿವಂಗತ ಡಾ.ಬಿ.ಅಹಮದ್ ಹಾಜಿ ತುಂಬೆ ಅವರ ಸಾಧನೆ, ವ್ಯಕ್ತಿತ್ವ, ಶಿಸ್ತು ಮತ್ತು ಬದ್ಧತೆ ಪ್ರಸ್ತುತ ದಿನಮಾನದಲ್ಲು ಸ್ಮರಣೀಯವಾಗಿದ್ದು,ತಂದೆಯ ಹಾದಿಯಲ್ಲೇ ಅವರ ಮಕ್ಕಳು ಸಾಗುತ್ತಿರುವುದು ಅಭಿನಂದನೀಯವಾಗಿದೆ ಎಂದು ಬರ್ನಿಂಗ್ ಹ್ಯಾಮ್ ಹೀರ್ಸಿಂಕ್ ಸ್ಕೂಲ್ ಆಫ್ ಮೆಡಿಸಿನ್ ನ ಅಲಬಾಮಾ ಯುನಿವರ್ಸಿಟಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಫಾರ್ ಮೆಡಿಸಿನ್ ನಲ್ಲಿ ಮತ್ತು ಡೀನ್ ಆಗಿರುವ ಡಾ.ಅಗರ್ ವಾಲ್ ಹೇಳಿದರು.

ಅವರು ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ತುಂಬೆ ಇದರ ವತಿಯಿಂದ ಶನಿವಾರ ತುಂಬೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಾಧಿಪತಿಗಳು ತುಂಬೆಯ ವಿದ್ಯಾಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಅರ್ಹ ಮಕ್ಕಳಿಗೆ ಒಂದು ಎಂ.ಬಿ.ಬಿ.ಎಸ್ ಮತ್ತು ಐದು ಪ್ಯಾರಾ ಮೆಡಿಕಲ್ ಸೀಟುಗಳನ್ನು ಉಚಿತವಾಗಿ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದೇ ವೇಳೆ ತುಂಬೆ ಮೊಯ್ದೀನ್ ಅವರು ಶಾಲೆಗೆ ನಿರ್ಮಿಸಿಕೊಟ್ಟ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ನ್ನು ಬರ್ನಿಂಗ್ ಹ್ಯಾಮ್ ನ ಅಲಬಾಮಾ ಯುನಿವರ್ಸಿಟಿಯ ಗ್ರಾಜುವೇಟ್ ಸ್ಕೂಲ್ ನ ರಿಸರ್ಚ್ ಎಂಡ್ ಟ್ರೈನಿಂಗ್ ಸೆಂಟರ್ ನ ಎಸೋಸಿಯೇಟ್ ಡೀನ್ ಆಗಿರುವ ಡಾ.ಲಿಸಾ ಎಂ ಕರ್ಟಿಸ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.ಕಂಪ್ಯೂಟರ್ ಲ್ಯಾಬ್ ನಿರ್ವಹಿಸುತ್ತಿರುವ ಗೋಪಾಲ್ ಅವರು ಉಪಸ್ಥಿತರಿದ್ದರು.
ಕಾಲೇಜಿನ ಸಿವಿಲ್ ಕೆಲಸದಲ್ಲಿ ಸಹಕರಿಸಿದ ಬಿ.ಎ.ಗ್ರೂಪ್ ನ ಸಿರಾಜ್ ಮತ್ತು ಸುಧೀರ್ ಅವರನ್ನು ಗೌರವಿಸಲಾಯಿತು.
ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಚಿತ್ರ ಕಲಾ ಅಧ್ಯಾಪಕ ಪದ್ಮನಾಭ ಅವರು ಸಂಸ್ಥಾಪಕರಾದ ಡಾ.ಅಹಮದ್ ಹಾಜಿ ಅವರ ಸಂಸ್ಮರಣೆಗೈದರು.
ತುಂಬೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಡಾ. ಅಹಮದ್ ಹಾಜಿಯವರ ಗುಣಗಾನಗೈದರು.
ಎಂ.ಇ.ಟಿ ಟ್ರಸ್ಟೀ ಮೊಹಮ್ಮದ್ ಅಶ್ರಫ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್, ಕಾರ್ಯಕಾರಿ ಸಮಿತಿಯ ಪ್ರಮುಖರಾದ ಮ್ಯಾಕ್ಸಿಂ ಕುವೆಲ್ಹೋ,ಬಶೀರ್ ತಂಡೇಲ್,ಶಾಫಿ ಅಮ್ಮೆಮ್ಮಾರ್,ತುಂಬೆ ಹೈಸ್ಕೂಲ್ ನ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆ,ನಿವೃತ್ತ ಕನ್ನಡ ಶಿಕ್ಷಕ ರಾಜ ಶೆಟ್ಟಿ, ಎಂ.ಇ.ಟಿ ಮ್ಯಾನೇಜರ್ ಅಬ್ದುಲ್ ಕಬೀರ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ ಮತ್ತಿತರರಿದ್ದರು.
ತುಂಬೆ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿ.ಎಸ್. ಭಟ್ ಸ್ವಾಗತಿಸಿದರು. ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ ವಂದಿಸಿದರು,ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
