ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ (ರಿ.),ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿ, ಬಂಟ್ವಾಳ ಇದರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ
“ಬಾಳಪಥ”ಡಾ| ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಂಚಿಕೆ ಬಿಡುಗಡೆ ಹಾಗೂ ಅಮೂಲ್ಯ ಸ್ವಸಹಾಯ ಸಂಘದ ಸದಸ್ಯರ ಸಮ್ಮಿಲನ ಸಮಾರಂಭವು ಶನಿವಾರ ಬಂಟ್ವಾಳ ಬೈಪಾಸ್ ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದಲ್ಲಿ ನಡೆಯಿತು.

ಬೆಂಗಳೂರಿನ ಸಾಮಾಜಿಕ ಧುರೀಣರಾದ ಮೋಹನದೇವ ಆಳ್ವ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ,ದಿವಂಗತ ಅಮ್ಮೆಂಬಳ ಬಾಳಪ್ಪರು ಬಾಲ್ಯದಿಂದಿಂದಲೇ ತನ್ನ ಒಡನಾಡಿಯಾಗಿದ್ದರು, ಸತ್ಯ,ನಿಷ್ಠರಾಗಿದ್ದರಲ್ಲದೆ ಎಲ್ಲಾವರ್ಗದ ಜನರನ್ನು ಪ್ರೀತಿಸಿ ಜನಸ್ನೇಹಿಯಾಗಿದ್ದರು.ಬಾಳಪ್ಪರು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘವು ಹಲವರ ಬದುಕಿಗೆ ಬೆಳಕಾಗಿದ್ದು, ಸಂಘವು ರಾಜ್ಯವ್ಯಾಪಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಕುಲಾಲ ಸಮಾಜವು ತುಳುನಾಡಿನ ಸಚ್ಚಾರಿತ್ರ್ಯ,ಸ್ವಪ್ರೇಮವುಳ್ಳ ಶ್ರೇಷ್ಟ ಜನಾಂಗ
ವಾಗಿದೆ.ತುಳು ನಮ್ಮ ಮಾತೃಭಾಷೆಯಾದರೆ,ಕನ್ನಡ ಭಾಷೆ ರಾಜ್ಯಕ್ಕೆ ಸಾರ್ವಭೌಮವಾಗಿದ್ದು,ದೇಶದ ಎಲ್ಲಾ ಭಾಷೆಯನ್ನು ಗೌರವಿಸಬೇಕು ಎಂದರು.
ಡಾ। ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅವರು ಅಧ್ಯಕ್ಷತೆ ವಹಿಸಿದ್ದರು ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಅವರು ದಿ.ಅಮ್ಮೆಂಬಳ ಬಾಳಪ್ಪರ ಹೋರಾಟದ ದಿನಗಳನ್ನು ಸ್ಮರಿಸಿದರು.
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ,ಸಂಚಿಕೆಯ ಪ್ರಧಾನ ಸಂಪಾದಕರಾದ ಡಾ. ದುಗ್ಗಪ್ಪ ಕಜೆಕಾರ್,ನಿವೃತ್ತ ಯೋಧ ಚಂದಪ್ಪ ಮೂಲ್ಯ,ಸಮಾಜ ಸೇವಾ ಸಹಕಾರಿ ಸಂಘ ನಿ. ದ ಅಧ್ಯಕ್ಚ ಸುರೇಶ್ ಕುಲಾಲ್ ,ಉಪಾಧ್ಯಕ್ಷ ಜನಾರ್ದನ ಬೊಂಡಾಲ,ಹಿರಿಯ ನಿರ್ದೇಶಕಬೋಜ ಕುಲಾಲ್ ಹಾಗೂ ಸಂಘದ ನಿರ್ದೇಶಕರು,ಪ್ರತಿಷ್ಠಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.
ಸಂಘದ ಪ್ರದಾನ ವ್ಯವಸ್ಥಾಪಕ ಭೋಜ ಮೂಲ್ಯ ಪ್ರಸ್ತಾವನೆಗೈದರು. ನಿರ್ದೇಶಕರಾದ ಕಿರಣ್ ಕಿಟ್ಲೂರು ಸ್ವಾಗತಿಸಿದರು.ಸತೀಶ್ ಪಲ್ಲಮಜಲು ವಂದಿಸಿದರು. ಸಹಾಯಕ ಸಿಇಒ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಇದೇ ವೇಳೆ ವಿಟ್ಲ ಕುಲಾಲ ಸಂಘ ಹಾಗೂ ಪ್ರತಿಷ್ಠಾನಕ್ಕೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು.
ಇದಕ್ಕು ಮೊದಲು ದಿವಂಗತ ದಿ.ಬಾಳಪ್ಪ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು.
