ಬಂಟ್ವಾಳ: ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದ ಪ್ರಯುಕ್ತ ಬಂಟ್ವಾಳ ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ನರಿಕೊಂಬು ಗ್ರಾ.ಪಂ.ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.


ದ.ಕ.ಜಿಲ್ಲೆಯ 25 ಗ್ರಾ.ಪಂ.ನಲ್ಲು ಬಂಟ್ವಾಳ ತಾಲೂಕಿನಲ್ಲಿನರಿಕೊಂಬು,ಕಾವಳಪಡೂರು, ವೀರಕಂಭ, ಸಜೀಪಪಡು, ಅಳಿಕೆ ಗ್ರಾ.ಪಂ.ಗಳಲ್ಲಿ ಈ ಅಭಿಯಾನ ಅನುಷ್ಠಾನಗೊಳ್ಳುತ್ತಿದ್ದು,ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ನರಿಕೊಂಬು‌ಗ್ರಾ.ಪಂ.ನಲ್ಲಿ ಚಾಲನೆ ನೀಡಲಾಗಿದೆ.


ನರಿಕೊಂಬು ಗ್ರಾ.ಪಂ.ನ ಪಿಡಿಒ ಹರೀಶ್ ಅಬನೊಯಾನದ ಉದ್ಘಾಟನೆ ನೆರವೇರಿಸಿ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಗ್ರಾ.ಪಂ.ಅಧಗಯಕ್ಷ ಸಂತೋಷ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು.


ಒಕ್ಕೂಟದ ಅಧ್ಯಕ್ಷೆ ಆರುಂಧತಿ,ಕೃಷಿ ಅಧಿಕಾರಿ ನಂದನ್ ಶೆಣೈ,ತೋಟಗಾರಿಕಾ ಇಲಾಖೆಯ ಹರೀಶ್‌ಕುಮಾರ್, ಕೃಷಿ ಇಲಾಖೆಯ ಹನುಮಂತಕಾಳಗಿ,ಪ್ರವೀಣ್ ಕುಮಾರ್,ವೀಣಾ ಡಿಸೋಜ,ಸಮೂಹ ಸಂನ್ಮೂಲ ವ್ಯಕ್ತಿಗಳಾದ ಪ್ರವೀಣ್,ವನೀತಾ ಹಾಗೂ ವೀರಕಂಭ ಸಿಆರ್ ಪಿ ಪುಪ್ಪಾವತಿ ಉಪಸ್ಥಿತರಿದ್ದರು.50 ಕ್ಕು ಹೆಚ್ಚು ರೈತರು ಇದರಲ್ಲಿ ಪಾಲ್ಗೊಂಡರು. 

By suddi9

Leave a Reply

Your email address will not be published. Required fields are marked *